ಬೆಂಗಳೂರು : ಭಾರೀ ನಿರೀಕ್ಷೆ ಮೂಡಿಸಿದ್ದ ತೆಲುಗಿನ ‘ವಿರಾಟ ಪರ್ವಂ’ ಸಿನಿಮಾ ಶುಕ್ರವಾರ ರಿಲೀಸ್ ಆಗಿದೆ. ರಾಣಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ನಟನೆಯ ನಕ್ಸಲಿಸಂ ಬ್ಯಾಕ್ಡ್ರಾಪ್ ಸಿನಿಮಾ ಬಾಕ್ಸಾಫೀಸ್ನಲ್ಲಿ ಕುಂಟುತ್ತಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ‘ವಿರಾಟ ಪರ್ವಂ’ ಸಿನಿಮಾ ಸದ್ದು ಮಾಡ್ತಿದೆ. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ತಡವಾಗಿತ್ತು. ರಾಣಾ, ಸಾಯಿ ಪಲ್ಲವಿ ಇಬ್ಬರಿಗೂ ದೊಡ್ಡ ಅಭಿಮಾನಿ ಬಳಗವಿದೆ. ಆದರೆ ಯಾಕೋ ಸಿನಿಮಾ ನೋಡೋಕೆ ಪ್ರೇಕ್ಷಕರು ಮಾತ್ರ ಥಿಯೇಟರ್ಗೆ ಬರ್ತಿಲ್ಲ. ಎಲ್ಲಾ ಕಡೆ ಥಿಯೇಟರ್ಗಳು ಖಾಲಿ ಹೊಡೀತಿದೆ. ಕರ್ನಾಟಕದಲ್ಲಂತೂ ಚಿತ್ರವನ್ನು ಕ್ಯಾರೆ ಅನ್ನುವವರಿಲ್ಲ. ಸಾಯಿ ಪಲ್ಲವಿ ನೀಡಿದ ವಿವಾದಾತ್ಮಕ ಹೇಳಿಕೆಯೇ ಇಷ್ಟಕ್ಕೆಲ್ಲಾ ಕಾರಣ ಅನ್ನೋ ಗುಸು ಗುಸು ಶುರುವಾಗಿದೆ.
ಸಾಯಿ ಪಲ್ಲವಿ ಕ್ರೇಜ್ ಬಗ್ಗೆ ಬಿಡಿಸಿ ಹೇಳೋದು ಬೇಕಿಲ್ಲ. ಅಭಿಮಾನಿಗಳು ‘ಲೇಡಿ ಪವರ್ ಸ್ಟಾರ್’ ಅಂತ್ಲೇ ಆಕೆಯನ್ನು ಕರೀತಾರೆ. ಆದರೆ ಕಳೆದ 4 ದಿನಗಳಿಂದ ‘ವಿರಾಟ ಪರ್ವಂ’ ಚಿತ್ರಕ್ಕೆ ಸಿಕ್ತಿರೋ ರೆಸ್ಪಾನ್ಸ್ ನೋಡ್ತಿದ್ರೆ, ಸಾಯಿ ಪಲ್ಲವಿ ಕ್ರೇಜ್ ಏನಾಯ್ತು ಅನ್ನುವ ಅನುಮಾನ ಮೂಡೋದು ಸಹಜ. ಈ ಸಿನಿಮಾ ಸೋಲಿನಿಂದ ರಾಣಾ ದಗ್ಗುಬಾಟಿಗೂ ಹಿನ್ನಡೆ ಆಗ್ತಿರೋದು ಸುಳ್ಳಲ್ಲ. ಈ ಸಿನಿಮಾ ಮೇಲೆ ರಾಣಾ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಮೂರೇ ದಿನಕ್ಕೆ ಕಥೆ ಹೀಗಾದ್ರೆ, ಮುಂದೆ ಹೇಗೆ ಅನ್ನೋ ಪ್ರಶ್ನೆ ಕೆಲವರನ್ನು ಕಾಡುತ್ತಿದೆ.
ಮ್ಯಾಜಿಕ್ ಮಾಡಲೇ ಇಲ್ಲ ಸಾಯಿ ಪಲ್ಲವಿ
ಸಾಯಿ ಪಲ್ಲವಿ ನಟಿಸಿದ ಲವ್ ಸ್ಟೋರಿ, ಶ್ಯಾಮ್ ಸಿಂಗ್ ರಾಯ್ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಆದರೆ ‘ವಿರಾಟ ಪರ್ವಂ’ ಸಿನಿಮಾ ಮಾತ್ರ ಸೋಲಿನ ಹಾದಿ ಹಿಡಿದಿದೆ. ಪ್ರೇಕ್ಷಕರನ್ನು ಥಿಯೇಟರ್ಗೆ ಕರ್ಕೊಂಡ್ ಬರೋದ್ರಲ್ಲಿ ಸಾಯಿ ಪಲ್ಲವಿಗೆ ಹಿನ್ನಡೆಯಾಗಿದೆ. ಸಿನಿಮಾ ಬಗ್ಗೆ ಆ್ಯವರೇಜ್ ಟಾಕ್ ಇದ್ರು, ಪ್ರೇಕ್ಷಕರು ಯಾಕೆ ಬರ್ತಿಲ್ಲ ಅನ್ನೋ ಪ್ರಶ್ನೆಗೆ ಚಿತ್ರತಂಡ ಉತ್ತರ ಹುಡುಕಬೇಕಿದೆ.
ವೇಣು ಉಡುಗುಲ ನಿರ್ದೇಶನದಲ್ಲಿ ರಾಣಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ನಿರ್ದೇಶನದ ರೊಮ್ಯಾಂಟಿಕ್ ಆ್ಯಕ್ಷನ್ ಎಂಟರ್ಟೈನರ್ ಸಿನಿಮಾ ವಿರಾಟ ಪರ್ವಂ. ನಲ್ಸಲಿಸಂ ಬ್ಯಾಕ್ಡ್ರಾಪ್ನಲ್ಲಿ ಈ ಕಥೆಯನ್ನು ಕಟ್ಟಿಕೊಡಲಾಗಿದ್ದು, ರವನ್ನ ಮತ್ತು ವೆನ್ನೆಲ ಪಾತ್ರಗಳಲ್ಲಿ ರಾಣಾ ಹಾಗೂ ಸಾಯಿ ಪಲ್ಲವಿ ನಟಿಸಿದ್ದಾರೆ.
ಇದನ್ನೂ ಓದಿ : ನಮೋಗಾಗಿ ವಿಶೇಷ ಮೈಸೂರು ಪೇಟ.. ! ಮೋದಿಯ ತಲೆಯ ಮೇಲೆ ಇಂದು ಮೀರ ಮೀರ ರಾರಾಜಿಸುವ ಆಕರ್ಷಕ ಪೇಟ..!