ಉಡುಪಿ : ಉಡುಪಿಯ ಅಕ್ರಮ ಮತಾಂತರ ಕೇಂದ್ರದ ಮೇಲೆ ದಾಳಿ ಮಾಡಲಾಗಿದ್ದು, ಕಾರ್ಕಳದ ಕುಕ್ಕುಂದೂರಿನ ನಕ್ರೆ ಆನಂದಿ ಮೈದಾನದಲ್ಲಿ ಘಟನೆ ನಡೆದಿದೆ. ಕಳೆದ 10 ವರ್ಷಗಳಿಂದ ಮತಾಂತರ ಮಾಡ್ತಿದ್ದ ಆರೋಪದ ಮೇಲೆ ಈ ದಾಳಿ ನಡೆದಿದ್ದು, ಪ್ರಗತಿ ಸೆಂಟರ್ಗೆ ಹಿಂದೂ ಜಾಗರಣ ವೇದಿಕೆ ಲಗ್ಗೆ ಹಾಕಿದ್ದಾರೆ. ದಿಢೀರ್ ದಾಳಿಯಿಂದ ಪ್ರಾರ್ಥನಾ ನಿರತರು ಕಕ್ಕಾಬಿಕ್ಕಿಯಾಗಿದ್ದಾರೆ. ಯಾವುದೇ ಅನುಮತಿ ಪಡೆಯದೆ ಪ್ರಾರ್ಥನಾಲಯ ನಡೆಸುತ್ತಿದ್ದ ಮತ್ತು 60ಕ್ಕೂ ಹೆಚ್ಚು ಮಹಿಳೆಯರನ್ನು ಮತಾಂತರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಬೆನಡಿಕ್ಟ್ ಎಂಬಾತನ ನೇತೃತ್ವದಲ್ಲಿ ಮತಾಂತರ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.