ಹುಬ್ಬಳ್ಳಿ: ವೇಶ್ಯಾವಾಟಿಕೆ ನಡೆಸುತ್ತಿರುವ ದೂರಿನ ಮೇಲೆ, ನಗರದ ಜೆಸಿ ನಗರದ ಲಾಜ್ಡ್‌ವೊಂದರ ಮೇಲೆ ಶಹರ ಠಾಣೆ ಪೊಲೀಸರು ಗುರುವಾರ ತಡರಾತ್ರಿ ದಾಳಿ ನಡೆಸಿ ಮಾಲೀಕ, ಮ್ಯಾನೇಜರ್ ಸೇರಿ ಐವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಕ ದಂಪತಿಗಳ ಗಣೇಶ ಹಬ್ಬ ಎಷ್ಟು ವಿಭಿನ್ನ ಗೊತ್ತಾ..? 23 ವರ್ಷದ ವಿದ್ಯಮಾನಗಳು ಗಣೇಶ ಹಬ್ಬದಂದು ಮೂಡಿದೆ
ನಗರದ ಕಂಫರ್ಟ್ ಜಯಲಕ್ಷ್ಮೀ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಶಹರ ಠಾಣೆ ಇನ್‌ಸ್ಪೆಕ್ಟರ್ ಆನಂದ ಒನಕುದ್ರೆ ನೇತೃತ್ವದ ತಂಡ ದಾಳಿ ನಡೆಸಿ ಮಾಲೀಕ, ಮ್ಯಾನೇಜರ್, ಆಟೋ ಚಾಲಕ ಹಾಗೂ ಇತರರನ್ನು ಬಂಧಿಸಿ, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ನಂಜನಗೂಡಲ್ಲಿ ರಾತ್ರೋರಾತ್ರಿ ಪುರಾತನ ದೇಗುಲ ನೆಲಸಮ… ಕಳ್ಳರಂತೆ ರಾತ್ರಿ ವೇಳೆ ದೇಗುಲ ಕೆಡವುವ ಅವಶ್ಯಕತೆ ಏನಿತ್ತು… ?
ಲಾಡ್ಜ್ ಮಾಲೀಕನ ಜೊತೆ ಶಾಮೀಲಾಗಿ ಆಟೋ ಚಾಲಕ ಗಿರಾಕಿಗಳನ್ನ ಕರೆದುಕೊಂಡು ಬರುತ್ತಿದ್ದನೆಂದು ಗೊತ್ತಾಗಿತ್ತು. ಈ ಸಮಯದಲ್ಲಿ ಹೊಂಚು ಹಾಕಿ ಕುಳಿತಿದ್ದ ಪೊಲೀಸರು, ದಂಧೆ ನಡೆಸುವ, ನಡೆಸಲು ನೆರವಾಗುವ ಮ್ಯಾನೇಜರ್ ಮತ್ತು ಗಿರಾಕಿಗಳನ್ನ ಕರೆದುಕೊಂಡು ಬರುವ ಆಸಾಮಿ ಸಮೇತ ಎಲ್ಲರನ್ನೂ ಹೆಡೆಮುರಿ ಕಟ್ಟಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮೆಹಬೂಬ್ ಮುನವಳ್ಳಿ ಹುಬ್ಬಳ್ಳಿ