ಕಾಬೂಲ್: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಕನಿಷ್ಟ 920 ಜನರು ಮೃತಪಟ್ಟಿದ್ದು, 600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಪಕ್ಟಿಕಾ ಪ್ರಾಂತ್ಯ ದಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿದೆ. ಪಕ್ಟಿಕಾ ಪ್ರಾಂತ್ಯದಲ್ಲಿರುವ ಖೋಸ್ತ್ ನಗರದ ಆಗ್ನೇಯ ಭಾಗದಲ್ಲಿ 44 ಕಿ.ಮೀ. ದೂರದಲ್ಲಿ ಭೂಮಿಯೊಳಗೆ 57 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ. ರಾತ್ರಿ 1.30 (ಸ್ಥಳೀಯ ಕಾಲಮಾನ) ಕ್ಕೆ ಭೂಕಂಪನ ಸಂಭವಿಸಿದೆ. ಭೂಕಂಪನದ ತೀವ್ರತೆಗೆ ನೂರಾರು ಮನೆಗಳು ನೆಲಸಮವಾಗಿದ್ದು, ಮನೆಗಳಲ್ಲಿ ಮಲಗಿದ್ದವರು ಅಲ್ಲೇ ಸಮಾಧಿಯಾಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ತಾಲಿಬಾನಿ ಅಧಿಕಾರಿಗಳು ತಿಳಿಸಿದ್ದಾರೆ.
1/2: The death tool from the #AfghanEarthquake has passed one thousand & is feared to be Much higher since many villages are leveled to ground & inhabitants still trapped under. The number of injured is even higher. Tens of thousands are suddenly without shelter, food, medicine.. pic.twitter.com/Yhkwzp7Ibc
— Dr Omar Zakhilwal (@DrOmarZakhilwal) June 22, 2022
ತಾಲಿಬಾನ್ ಸರ್ಕಾರ ಭೂಕಂಪ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಪಕ್ಟಿಕಾ ಪ್ರಾಂತ್ಯd ಗಯಾನ್ ಮತ್ತು ಬರ್ಮಲ್ ಜಿಲ್ಲೆಗಳಲ್ಲಿ ಹೆಚ್ಚು ಜನರು ಮೃತಪಟ್ಟಿರುವ ವರದಿಯಾಗಿದೆ.
ಅಫ್ಘಾನಿಸ್ತಾನದಲ್ಲಿ ಆಗಾಗ್ಗೆ ಭೂಕಂಪನಗಳು ಸಂಭವಿಸುತ್ತಿರುತ್ತವೆ. ಕಳೆದ 10 ವರ್ಷಗಳಲ್ಲಿ ಆಫ್ಘನ್ ನಲ್ಲಿ ಸುಮಾರು 10 ಸಾವಿರ ಜನರು ಭೂಕಂಪನಗಳಿಂದಾಗಿ ಮೃತಪಟ್ಟಿದ್ದಾರೆ. ಪ್ರತಿ ವರ್ಷ ಸುಮಾರು 560 ಜನರು ಭೂಕಂಪನದಿಂದಾಗಿ ಸಂಭವಿಸುವ ಅವಘಡಗಳಿಂದ ಮೃತಪಡುತ್ತಾರೆ.