ದಿಸ್ಪುರ್ : ಅಸ್ಸಾಂ ಹೋಟೆಲ್ ಮುಂದೆ ಹೈಡ್ರಾಮಾವೇ ನಡೆದಿದ್ದು, ಶಿವಸೇನೆ ಬಂಡಾಯ ಶಾಸಕರು ಇರುವ ಹೋಟೆಲ್
ಮುಂದೆ ಟಿಎಂಸಿ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ಧಾರೆ.
ರ್ಯಾಡಿಸನ್ ಬ್ಲೂ ಹೋಟೆಲ್ ಮುಂದೆ ಪ್ರೊಟೆಸ್ಟ್ ನಡೆಸಲಾಗುತ್ತಿದೆ. ಏಕನಾಥ್ ಶಿಂಧೆ ಟೀಂ ಇರುವ ಗುವಾಹತಿ ಹೋಟೆಲ್ ಇದಾಗಿದೆ. ಟಿಎಂಸಿಯ ರಿಪುನ್ ಬೋರಾ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದು, ಶಾಸಕರನ್ನು ಬಲವಂತದಿಂದ ಕೂಡಿಡಲಾಗಿದೆ ಎಂದು ಪ್ರೊಟೆಸ್ಟ್ ಮಾಡುತ್ತಿದ್ಧಾರೆ. ಶಿವಸೇನೆ ಶಾಸಕರ ಭೇಟಿಗೆ ಅವಕಾಶ ನೀಡುವಂತೆ ಆಗ್ರಹಿಸಿದ್ಧಾರೆ.
ಪ್ರತಿಭಟನೆ ಶುರುವಾಗುತ್ತಿದ್ದಂತೆ ಹೋಟೆಲ್ಗೆ ಅಸ್ಸಾಂ ಮಂತ್ರಿ ಭೇಟಿ ನೀಡಿದ್ದಾರೆ. ಶಿವಸೇನೆಯ ಸಂಸದ ದೀಪಕ್ ಕಾಸರ್ಕರ್ ಕೂಡಾ ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ ಮೂವರು ಶಾಸಕರು ಶಿಂಧೆ ಕ್ಯಾಂಪ್ ಸೇರಿದ್ದಾರೆ. ಸದಾ ಸಾರ್ವಕರ್, ಮಂಗೇಶ್ ಕುಡಲ್ಕರ್ ಗುವಾಹಟಿಗೆ ಆಗಮಿಸಿದ್ದಾರೆ.