ಕೊಡಗು: ಶಸ್ತ್ರಾಸ್ತ್ರ ತರಬೇತಿ ವಿವಾದ ಸಂಬಂಧ ಕೊನೆಗೂ ಪೊನ್ನಂಪೇಟೆ ತಾಲೂಕಿನ ಶ್ರೀ ಸಾಯಿ ವಿದ್ಯಾ ಸಂಸ್ಥೆ ಆಡಳಿತ ಮೌನ ಮುರಿದಿದೆ.
ಶಾಲಾ ವ್ಯಾಪ್ತಿಯಲ್ಲಿ ಬಂದೂಕು ತರಬೇತಿ ನಡೆದಿಲ್ಲ. ರಾಜಕೀಯ ವಿಚಾರಕ್ಕೆ ಶಾಲೆಯ ಹೆಸ್ರು ಎಳೆಯಬೇಡಿ ಎಂದು ಆಡಳಿತ ಮಂಡಳಿ ಅಧ್ಯಕ್ಷ ಝರು ಗಣಪತಿ ಹೇಳಿದ್ದಾರೆ. ದುಬೈ ಕರೆ ಬಗ್ಗೆಯೂ ಬಾಂಬ್ ಸಿಡಿಸಿದ ಗಣಪತಿ, ಮೂವರು ವಿದ್ಯಾರ್ಥಿಗಳ ಪೋಷಕರಿಗೆ ವಿದೇಶದಿಂದ ಕರೆ ಬಂದಿದೆ. ತಮ್ಮ ಮಕ್ಕಳನ್ನು ಆ ಶಾಲೆಯಲ್ಲಿ ಓದಿಸಬೇಡಿ ಎಂದು ಹೇಳಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆಯಿಂದ ಟಿಸಿ ಪಡೆದು ಹೋಗಿದ್ದಾರೆ ಎಂದು ಝರು ಗಣಪತಿ ಹೇಳಿದ್ದಾರೆ.