ಬೆಂಗಳೂರು: ದಾನದಲ್ಲಿ ಶ್ರೇಷ್ಟವಾದ ದಾನವೆಂದರೆ ನೇತ್ರದಾನ, ಹಾಗಾಗಿ ಕಣ್ಣಿನ ಆರೈಕೆ ಬಹುಮುಖ್ಯವಾದ ವಿಚಾರ. ನೀವು ಹೆಚ್ಚಾಗಿ ಐ ಡ್ರಾಪ್ ಬಳಸುತ್ತಿದ್ದರೆ, ಅಡಿಕ್ಟ್ ಆಗಿದ್ದರೆ, ಸಮಸ್ಯೆಗಳು ಕಂಡುಬರುವುದು ಖಾಯಂ, ನಿಮ್ಮ ಕಣ್ಣುಗಳ ಸುರಕ್ಷತೆಗಾಗಿ ಒಂದೊಮ್ಮೆ ಈ ಸ್ಟೋರಿ ಓದಿ…
ಸಂಸ್ಕೃತದ ಒಂದು ನುಡಿಯಾದ ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ ಈ ಸಾಲಿನ ಅರ್ಥವೇನೆಂದರೆ ದೇಹದ ಎಲ್ಲಾ ಇಂದ್ರಿಯಗಳಲ್ಲಿ ಕಣ್ಣುಗಳು ಪ್ರಮುಖವಾದದ್ದು ಎಂಬುದಾಗಿದೆ ಹಾಗಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡಿಡಿಕೊಳ್ಳುವುದು ಮಹತ್ವದ ವಿಷಯವಾಗಿದೆ. ಎಷ್ಟೋ ಮನಸ್ಸುಗಳಿಗೆ ನೇತ್ರದಾನ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ನಿಮ್ಮ ಆಸೆ ಪೂರ್ಣಗೊಳ್ಳಬೇಕಾದರೆ ಕಣ್ಣಿನ್ನು ಸುರಕ್ಷತೆಯಿಂದ ಇಟ್ಟುಕೊಳ್ಳಬೇಕಾಗಿದೆ.
ಪ್ರಸ್ತುತ ಕಣ್ಣಿನ ಸಮಸ್ಯೆ ಬಗ್ಗೆ ನವದೆಹಲಿಯ ವಿಷನ್ ಐ ಸೆಂಟರ್‌ನ ವೈದ್ಯಕೀಯ ನಿರ್ದೇಶಕ ಡಾ. ತುಷಾರ್ ಗ್ರೋವರ್ ಸಂದರ್ಶನವೊಂದರಲ್ಲಿ ಮಾತನಾಡಿ, ನಾವು ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಇ–ರೀಡರ್‌ಗಳು ಮತ್ತು ದೂರದರ್ಶನ ಸೇರಿದಂತೆ ಹೆಚ್ಚು ಹೆಚ್ಚು ಡಿಜಿಟಲ್ ಪರದೆಗಳನ್ನು ಬಳಸುತ್ತಿದ್ದೇವೆ. ಈ ಕಾರಣದಿಂದಾಗಿ, ಇವೆಲ್ಲವೂ ನಮ್ಮ ಕಣ್ಣುಗಳ ಮೇಲೆ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದರಿಂದಾಗಿ ಕಣ್ಣುಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರಿಂದ ಕಣ್ಣುಗಳಲ್ಲಿ ನೋವು, ತಲೆನೋವು, ದೃಷ್ಟಿ ಮಂದವಾಗುವುದು, ಕಣ್ಣುಗಳು ಒಣಗುವುದರ ಜತೆಗೆ ಕುತ್ತಿಗೆ ಮತ್ತು ಭುಜಗಳಲ್ಲಿ ನೋವು ಉಂಟಾಗುತ್ತದೆ. ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ, ನಿಮ್ಮ ಮಲಗುವ ಕ್ರಮದಲ್ಲಿ ತೊಂದರೆಯಾದರೆ, ಮುಂದಿನ ದಿನಗಳಲ್ಲಿ ಅದು ನಿಮಗೆ ದೊಡ್ಡ ಸಮಸ್ಯೆಯಾಗಬಹುದು ಎಂದು ತಿಳಿಸಿದ್ದಾರೆ.
ಕಣ್ಣನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕಾದರೆ ನಾವು ದೈನಂದಿನ ಚಟುವಟಿಕೆಗಳಲ್ಲಿ ಕೆಲ ನಿಯಮಗಳನ್ನು ಪಾಲಿಸಲೇಬೇಕಾಗಿರುವದು ಅನಿವಾರ್ಯವಾಗಿದೆ. ಅವೆಂದರೆ:
- ಕಣ್ಣನ್ನು ಬಿಸಿ ನೀರಿನಿಂದ ತೊಳೆಯಬಾರದು, ಇದರಿಂದ ಕಣ್ಣಿಗೆ ಹಾನಿಯಾಗುವ ಪ್ರಮಾಣ ಜಾಸ್ತಿ ಇರುವುದರಿಂದ ಸಾಮಾನ್ಯವಾಗಿ ತಣ್ಣೀರಿನಲ್ಲಿ ಕಣ್ಣು ತೊಳೆಯುವುದರಿಂದ ಕಣ್ಣಿಗೆ ಸಂಬಂಧಿಸಿದಂತೆ ಯಾವುದೇ ಹಾನಿಯಾಗುವುದಿಲ್ಲ.
- ಐ ಡ್ರಾಪ್ ಅನ್ನು ಅತಿಯಾಗಿ ಬಳಸಬಾರದು, ಕಣ್ಣಿಗೆ ಸಂಬಂಧಿಸಿದಂತೆ ಕಿರಿಕಿರಿ ಉಂಟಾದರೆ ಎಲ್ಲರೂ ಅತಿ ಹೆಚ್ಚಾಗಿ ಐ ಡ್ರಾಪ್ ಬಳಸುತ್ತಾರೆ ಇದರಿಂದ ಕಾಲ ಕಳೆದಂತೆಲ್ಲಾ ಕಣ್ಣುಗಳಲ್ಲಿನ ಲೂಬ್ರಿಕೆಂಟ್ಗಳು ಕ್ರಮೇಣವಾಗಿ ಕೊನೆಗೊಳ್ಳುತ್ತವೆ. ಇದರಿಂದಾಗಿ ಕಣ್ಣುಗಳ ಒಣಗುವಿಕೆಗೆ ಕಾರಣವಾಗುತ್ತದೆ.ಹಾಗಾಗಿ ಐ ಡ್ರಾಪ್ನ್ನು ಹೆಚ್ಚಾಗಿ ಬಳಸಬಾರದು.
- ಕಣ್ಣನ್ನು ಅತೀ ಹೆಚ್ಚಾಗಿ ಉಜ್ಜಲೇಬಾರದು, ಕಣ್ಣಲ್ಲಿ ಏನೇ ಬಿದ್ದರೂ, ಸಮಸ್ಯೆ ಕಾಣಿಸಿಕೊಂಡರೂ ಮೋದಲು ನಾವು ಕಣ್ಣನ್ನು ಉಜ್ಜಲು ಪ್ರಾರಂಭಿಸುತ್ತೇವೆ ಇದನ್ನು ಮಾಡಬಾರದು ಹೀಗೆ ಮಾಡುವುದರಿಂದ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಇದರ ಬದಲು ತಣ್ಣಿರನ್ನು ಅಂಗೈಯಲ್ಲಿ ಹಾಕಿಕೊಂಡು ಒಂದೆರಡು ಬಾರಿ ಮಿಟಿಕಿಸಿದರೆ ಏನೇ ಬಿದ್ದಿದ್ದರೂ, ಕಿರಿಕಿರಿ ಉಂಟಾದರೂ ಮಾಯವಾಗುತ್ತದೆ.
- ಕಣ್ಣನ್ನು ಆಗಾಗ ಮಿಟುಕಿಸುವುದು ಒಳ್ಳೆಯದು, ಇದರಿಂದ ಕಣ್ಣು ನೋವು ಮತ್ತು ಒತ್ತಡವನ್ನು ತಪ್ಪಿಸಲು ಮಿಟುಕಿಸುವುದು ಅತ್ಯಂತ ಮುಖ್ಯವಾಗಿದೆ. ನಿಮ್ಮ ಕಣ್ಣುಗಳನ್ನು ರಕ್ಷಿಸಲು ಇದು ಒಂದು ಮಾರ್ಗವಾಗಿದೆ. ಇದು ನಿಮ್ಮ ಕಣ್ಣುಗಳಿಗೆ ವಿರಾಮವನ್ನು ನೀಡುತ್ತದೆ ಮತ್ತು ಕಣ್ಣುಗಳು ಲೂಬ್ರಿಕೇಟ್ ಆಗುವುದನ್ನು ತಡೆಯುತ್ತದೆ. ಇದರಿಂದ ಕಣ್ಣು ಒಣಗುವ ಸಮಸ್ಯೆ ಇರುವುದಿಲ್ಲ, ಇದು ನಿಮ್ಮ ಕಣ್ಣಿನಲ್ಲಿರುವ ಕೊಳೆಯನ್ನೂ ಸ್ವಚ್ಛಗೊಳಿಸುತ್ತದೆ. ಮೊಬೈಲ್ ಅಥವಾ ಇತರ ಗ್ಯಾಜೆಟ್‌ಗಳನ್ನು ಬಳಸುವಾಗ, ನಾವು ಪರದೆಯ ಮೇಲೆ ಅಂಟಿಕೊಂಡಿರುತ್ತೇವೆ ಮತ್ತು ನಾವು ಕಣ್ಣು ಮಿಟುಕಿಸುವುದನ್ನು ಮರೆತುಬಿಡುತ್ತೇವೆ ಇದರಿಂದ ಒತ್ತಡ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ ಹಾಗಾಗಿ ಕಣ್ಣು ಮಿಟುಕಿಸುವುದು ಒಳ್ಳೆಯದು.
- ರಾತ್ರಿ ಮಲಗುವ ಮುನ್ನ ಕಣ್ಣಿಗೆ ಪಟ್ಟಿ ಕಟ್ಟಿ ಅಥವಾ ಐ ಮಾಸ್ಕ್ ಹಾಕಿ ಮಲಗುವುದು ಕಣ್ಣಿಗೆ ಒಳ್ಳೆಯದಲ್ಲ. ಯಾವುದೇ ರೀತಿಯ ಪಟ್ಟಿ ಅಥವಾ ಐ ಮಾಸ್ಕ್ ಅನ್ನು ರಾತ್ರಿಯಲ್ಲಿ ಕಣ್ಣುಗಳಿಗೆ ಧರಿಸಬಾರದು. ಹೀಗೆ ಮಾಡುವುದರಿಂದ ಕಣ್ಣಿನಲ್ಲಿ ಸೋಂಕಿನ ಅಪಾಯವನ್ನು ಹೆಚ್ಚಾಗುತ್ತದೆ. ಈ ವಿಷಯದಲ್ಲಿ ಎಚ್ಚರ ವಹಿಸುವುದು ತುಂಬಾ ಮುಖ್ಯ.
ಒಟ್ಟಾರೆಯಾಗಿ ಈ ಮೇಲಿನ ಕ್ರಮಗಳನ್ನು ಅನುಸರಿಸುವುದರಿಂದ ಎಲ್ಲರ ಕಣ್ಣುಗಳು ಸುರಕ್ಷಿತವಾಗಿರುತ್ತವೆ.
ಇದನ್ನೂ ಓದಿ:ತಿಂಗಳಿಂದ ಒಂದೇ ಜಾಗದಲ್ಲಿ ಠಿಕಾಣಿ.. ಪ್ರತಿದಿನ ಅಲ್ಲೇ ಬಂದು ಮಲಗುವ ಹಾವು… ನಾಗಪ್ಪನ ನಡೆಯಿಂದ ಜನರಿಗೆ ಅಚ್ಚರಿ..!