ಧಾರವಾಡ: ‘ಅಪ್ಪು‘ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸಲು ಮುಂದಾಗಿದ್ದಾರೆ. ಪುನೀತ್ಗಾಗಿ ಮಹಿಳಾ ಅಭಿಮಾನಿಯೊಬ್ಬರು ಬರೋಬ್ಬರಿ 500 ಕಿಲೋ ಮೀಟರ್ ಪಾದಯಾತ್ರೆ ಮಾಡಲಿದ್ದಾರೆ. ಧಾರವಾಡದ ಮನಗುಂಡಿಯಿಂದ ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿವರೆಗೂ ಪಾದಯಾತ್ರೆ ಕೈಗೊಂಡಿದ್ದಾರೆ.
‘ಅಪ್ಪು‘ ಅಗಲಿಕೆಯಿಂದ ಇಡೀ ಕರ್ನಾಟಕವೇ ಮಂಕಾದಂತಿದೆ. ಅಪ್ಪು ಅಗಲಿ ಒಂದು ತಿಂಗಳು ಕಳೆದರು ಆ ಕಹಿ ದಿನವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಪುನೀತ್ ಕರುನಾಡಿಗರ ಮನಸ್ಸಿನಲ್ಲಿ ಶಾಶ್ವತವವಾಗಿ ಉಳಿದುಬಿಟ್ಟಿದ್ದಾರೆ. ಕೆಲ ಅಭಿಮಾನಿಗಳು ದೂರದ ಊರಿನಿಂದ ಎತ್ತಿನ ಬಂಡಿ ಹತ್ತಿ ಬಂದಿದ್ದರು. ಇನ್ನು ಕೆಲ ಅಭಿಮಾನಿಗಳು ನೂರಾರು ಕಿಲೋ ಮೀಟರ್ ದೂರದಿಂದ ಬೈಕ್ ಹತ್ತಿ ಅಪ್ಪು ಸಮಾಧಿ ದರ್ಶನಕ್ಕೆ ಧಾವಿಸಿದ್ದಾರೆ. ಇಲ್ಲೊಬ್ಬ ಮಹಿಳಾ ಅಭಿಮಾನಿ 500ಕಿಲೋ ಮೀಟರ್ ದೂರದಿಂದ ಅಪ್ಪು ಸಮಾಧಿ ಬಳಿ ನಡೆದುಕೊಂಡು ಬರುತ್ತಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ಜಾಮ್ ಆಗಿದ್ದೇ ಅಪ್ಪು ಸಾವಿಗೆ ಕಾರಣ… ಭಾವುಕರಾದ ರಾಘವೇಂದ್ರ ರಾಜ್ಕುಮಾರ್…
ಅಗಲಿದ ಅಪ್ಪುಗೆ ಅಭಿಮಾನಿಯೊಬ್ಬರು ವಿಭಿನ್ನ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಪುನೀತ್ಗಾಗಿ ಮಹಿಳಾ ಅಭಿಮಾನಿಯೊಬ್ಬರು ಬರೋಬ್ಬರಿ 500 ಕಿಲೋ ಮೀಟರ್ ಪಾದಯಾತ್ರೆ ಮಾಡುತ್ತಿದ್ದಾರೆ. ಧಾರವಾಡದ ಮನಗುಂಡಿಯಿಂದ ಮಕ್ಕಳ ಸಮೇತ ಬರ್ತಿರೋ ಅಭಿಮಾನಿ, ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿವರೆಗೂ ಪಾದಯಾತ್ರೆ ಮಾಡ್ತಿದ್ದಾರೆ. ಮನಗುಂಡಿ ಗ್ರಾಮದ ದಾಕ್ಷಾಯಿಣಿ ಉಮೇಶ ಪಾಟೀಲ ಎಂಬುವವರು ಅಪ್ಪು ತಿಂಗಳ ತಿಥಿಯ ದಿನವೇ ಪಾದಯಾತ್ರೆ ಆರಂಭಿಸಿದ್ದಾರೆ. ‘ಅಭಿ’ ಸಿನಿಮಾ ನೋಡಿ ಅಭಿಮಾನ ಬೆಳೆಸಿಕೊಂಡಿದ್ದ ದಾಕ್ಷಾಯಿಣಿ, ಪಾದಯಾತ್ರೆಯಲ್ಲಿ ಬಂದು ನೇತ್ರದಾನವನ್ನೂ ಮಾಡಲಿದ್ದಾರೆ. ದಾಕ್ಷಾಯಿಣಿಯ ಈ ಅಭಿಮಾನದ ಹರಕೆಗೆ ಪತಿ-ಮಕ್ಕಳಿಂದಲೂ ಸಹಕಾರ ಸಿಕ್ತಿದೆ.
ಇದನ್ನೂ ಓದಿ:ಕಲಬುರಗಿ ಮತ್ತೆ ಕೊರೊನಾ ಹಾಟ್ ಸ್ಪಾಟ್ ಆಗುವ ಆತಂಕ… ಚೆಕ್ಕಿಂಗ್ ಇಲ್ಲದೆ ಒಳ ನುಗ್ಗುತ್ತಿವೆ ಮಹಾಷ್ಟ್ರದ ವಾಹನಗಳು…