ಬೆಂಗಳೂರು: ‘ಕೊರೊನಾ ಒಮಿಕ್ರೋನ್‘ ನಿಂದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಆತಂಕ ಶುರುವಾಗಿದೆ. ಆಫ್ರಿಕಾ ಸೇರಿದಂತೆ ಕೆಲ ದೇಶಗಳಲ್ಲಿ ಹೊಸ ತಳಿ ಪತ್ತೆಯಾಗಿದ್ದು, 4 ರಾಷ್ಟ್ರಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಕೊರೊನಾ ಒಮಿಕ್ರೋನ್ ಎಂಬ ಹೊಸ ತಳಿಯ ವೈರಸ್ ಕಾಣಿಸಿಕೊಂಡಿದೆ. ಆಫ್ರಿಕಾ ಸೇರಿದಂತೆ ಕೆಲ ದೇಶಗಳಲ್ಲಿ ಈ ಹೊಸ ತಳಿ ಪತ್ತೆಯಾಗಿದೆ. ಕೊರೊನಾ ಡೆಲ್ಟಾ 2ನೇ ಅಲೆಯಲ್ಲಿ ವ್ಯಾಪಕವಾಗಿ ಹರಡಿತ್ತು. ಈಗ ಹೊಸದಾಗಿ ಕೊರೊನಾ ಒಮಿಕ್ರೋನ್ ಸಮುದಾಯಕ್ಕೆ ವೇಗವಾಗಿ ಹರಡುತ್ತೆ. ಹಾಗಾಗಿ 4 ರಾಷ್ಟ್ರಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗುವುದಲ್ಲದೆ, ಅವರು ಸ್ಟ್ರಿಕ್ಟ್ ರೂಲ್ಸ್ ಪಾಲಿಸಬೇಕು. ಅಲ್ಲದೇ, ಟೆಸ್ಟಿಂಗ್ ಹಾಗೂ ಟ್ರಾಕ್ ಕೂಡಾ ಮಾಡ್ತಿದ್ದೀವಿ ಎಂದ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ: #Flashnews ಕರ್ನಾಟಕದಲ್ಲಿ ಮತ್ತೆ ಲಾಕ್ಡೌನ್…? ಡಿಸೆಂಬರ್ 15ರ ನಂತರ ಲಾಕ್ ಮಾಡಲು ತಜ್ಞರ ಸೂಚನೆ…!