ಅನುಶ್ರೀ ಎಂದರೆ ನಟಿಯಾಗಿ ಎಷ್ಟು ಜನರಿಗೆ ಗೊತ್ತೋ ಗೊತ್ತಿಲ್ಲ. ಅನುಶ್ರೀ ಎಂದರೆ ಟಿವಿಯಲ್ಲಿ ಬರೋ ಆ್ಯಂಕರ್ ಅನುಶ್ರೀ ಎಂದೇ ಫೇಮಸ್. ಟಿವಿ ಪರದೆಯಲ್ಲಿ ಎಲ್ಲರಿಂದಲೂ ಹೊಗಳಿಸಿಕೊಳ್ಳುವ ಅನುಶ್ರೀ ತೆರೆ ಹಿಂದೆ ಮಾಡೋದೇ ಬೇರೆ. ಕುಣಿಯೋಣು ಬಾರಾ ಕಾರ್ಯಕ್ರಮದ ಆ್ಯಂಕರಿಂಗ್ ಮತ್ತು ಪ್ರಾಕ್ಟಿಸ್ ವೇಳೆಯಲ್ಲಿ ನಟಿ ಅನುಶ್ರೀಯವರು ಆ ಇಬ್ಬರು ಹುಡುಗರ ಜೊತೆ ಮಾಡಿದ್ದೇನು ಎಂದು ಕೇಳಿದರೆ ಶಾಕ್ ಆಗ್ತೀರಾ …!
ಇದನ್ನೂ ಓದಿ: ನಶೆ ರಾಣಿಗಿದ್ಯಾ ರಾಜಕೀಯ ಬೆಂಬಲ…? ಅನುಶ್ರೀ ಹೇರ್ ಫಾಲಿಕಲ್ ಟೆಸ್ಟ್ ಯಾಕೆ ಮಾಡಿಸಿಲ್ಲ..?: ಇಂದ್ರಜಿತ್ ಲಂಕೇಶ್
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ‘ಪರಮ ಸುಂದ್ರಿ’ ಹಾವಳಿ ! ಎಲ್ಲರ ಬಾಯಲ್ಲೂ ನಲಿದಾಡ್ತಿರೋ ಈ ಸುಂದ್ರಿ ಯಾರು ಗೊತ್ತಾ ?
ಮಂಗಳೂರು ಸಿಸಿಬಿ ಪೊಲೀಸರು ಕೋರ್ಟ್ಗೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಆ್ಯಂಕರ್ ಕಮ್ ನಟಿ ಅನುಶ್ರೀಯ ಬಣ್ಣ ಬಯಲಾಗಿದೆ. ಡ್ರಗ್ಸ್ ಆರೋಪಿ ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆಯಲ್ಲಿ ಅನುಶ್ರೀಯ ಇನ್ನೊಂದು ಭಯಾನಕ ಮುಖ ಬಟಾಬಯಲಾಗಿದೆ. ಮಂಗಳೂರು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಆರೋಪಿ ಕಿಶೋರ್ ಹೇಳಿಕೆ ದಾಖಲಾಗಿದೆ. ಕಿಶೋರ್ ಹೇಳಿಕೆಯಲ್ಲಿ “ನನಗೆ ಆ್ಯಂಕರ್ ಅನುಶ್ರೀಯನ್ನು ತರುಣ್ ಪರಿಚಯ ಮಾಡಿಕೊಟ್ಟ. ನಾವಿಬ್ಬರೂ ಸೇರಿಕೊಂಡು ಅನುಶ್ರೀಗೆ ಕೊರಿಯೋಗ್ರಾಫ್ ಮಾಡುತ್ತಿದ್ದೆವು. ನಾವು ಕೊರಿಯೋಗ್ರಾಫ್ ಮಾಡಿದ್ದರಿಂದಲೇ ಅನುಶ್ರೀ ಕುಣಿಯೋಣು ಬಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಳು. ಕೊರಿಯೋಗ್ರಾಫ್ ಬಳಿಕ ನಾವು ಮೂವರೂ ಸೇರಿಕೊಂಡು ರೂಂನಲ್ಲಿ ಪಾರ್ಟಿ ಮಾಡುತ್ತಿದ್ದೆವು. ಪಾರ್ಟಿಯಲ್ಲೂ ನಾವು ecstasy ಡ್ರಗ್ಸ್ ಸೇವಿಸುತ್ತಿದ್ದೆವು” ಎಂದು ಹೇಳಿದ್ದಾನೆ.
ಕಿಶೋರ್ ಶೆಟ್ಟಿಯ ಈ ಹೇಳಿಕೆಯಿಂದ ಅನುಶ್ರಿಗೆ ಮತ್ತೆ ಸಂಕಷ್ಟ ಶುರುವಾಗಿದೆ.