ನಟಿ ಅನುಷ್ಕಾ ಶರ್ಮಾ ಬಾಲಿವುಡ್ ಮೂಲಕ ಪ್ರಖ್ಯಾತರಾಗಿದ್ದಾರೆ. ಇವರು ತಮ್ಮ ವಿನೂತನ ಶೈಲಿಯ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಹೊಸ ಫೋಟೋಶೂಟ್ ನಿಂದ ಟ್ರೋಲ್ ಗೆ ಗುರಿಯಾಗಿದ್ದಾರೆ.
ಹೌದು… ನಟಿ ಅನುಷ್ಕಾ ಶರ್ಮಾ ಸದ್ಯ ಮಗಳ ಪಾಲನೆಯ ಜೊತೆ ಒಂದಿಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಇತ್ತೀಚಿನ ಹೊಸ ಫೋಟೋವೊಂದರಿಂದ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ.
ನೀಲಿ ಬಣ್ಣದ ಜೀನ್ಸ್‌ಗೆ ಹಳದಿ ಬಣ್ಣದ ಸ್ಲೀವ್ ಲೆಸ್ ಶಾರ್ಟ್ ಟಾಪ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಫೋಟೋವನ್ನ ಅನುಷ್ಕಾ ಹಂಚಿಕೊಂಡಿದ್ದರು. ದೇಹ ಪೂರ್ತಿ ಮುಚ್ಚಿರದ ಹಳದಿ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ನೆಟ್ಟಿಗರು ಮಗಳ ಬಟ್ಟೆ ಹಾಕಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ದೈನಂದಿನ ರಾಶಿ ಭವಿಷ್ಯ..! 26/01/23