ಚಿತ್ರದುರ್ಗ: ಲಂಚ ಪಡೆಯುವಾಗ ವಿಶೇಷ ಭೂ ಸ್ವಾಧೀನಾಧಿಕಾರಿ ACB ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ವಿಶೇಷ ಭೂ ಸ್ವಾಧೀನಾಧಿಕಾರಿ ವೀರೇಶ್ ಕುಮಾರ್ ಹಾಗೂ ಮ್ಯಾನೇಜರ್ ಮೋಹನ್, ಡ್ರೈವರ್ ಮನ್ಸೂರ್ ಚಿತ್ರದುರ್ಗ ACB ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಜಿಎಸ್ ಟಿ ವ್ಯಾಪ್ತಿಗೆ ಸೇರುತ್ತಾ ಪೆಟ್ರೋಲ್- ಡಿಸೇಲ್..? 75ರೂ.ಗೆ ಇಳಿಕೆಯಾಗುತ್ತಾ ಪೆಟ್ರೋಲ್..?
ಕೆಲ ಸರ್ಕಾರಿ ಅಧಿಕಾರಿಗಳು ಲಂಚ ಪಡೆಯುವುದು ರೂಢಿ ಮಾಡಿಕೊಂಡಂತೆ ಕಾಣುತ್ತೆ. ACB ಆಗಾಗ ಭ್ರಷ್ಟರನ್ನು ಭೇಟೆಯಾಡುತ್ತರುತ್ತಾರೆ. ಅದೇ ಲಿಸ್ಟ್ ಗೆ ಇನ್ನೊಬ್ಬ ಅಧಿಕಾರಿ ಸೇರಿಕೊಂಡಿದ್ದಾನೆ. ಚಿತ್ರದುರ್ಗದ ಹಿರಿಯೂರಿನ NH-150A ಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ವೀರೇಶ್ ACB ರೆಡ್ ವೇಳೆ ಸಿಕ್ಕಿಬಿದ್ದಿದ್ದಾನೆ. ನೇತ್ರಾ ಎಂಬುವರಿಗೆ 90 ಲಕ್ಷ ಪರಿಹಾರ ರಿಲೀಸ್ ಮಾಡಲು 6 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿ ವೀರೇಶ್ ಕುಮಾರ್. ಬೇಡಿಕೆ ಇಟ್ಟ 6 ಲಕ್ಷ ಲಂಚ ಸ್ವೀಕಾರ ಮಾಡ್ತಿದ್ದ ಸಮಯಕ್ಕೆ ACB ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ಮಾಡಿ. ವೀರೇಶ್ ಕುಮಾರ್ ಹಾಗೂ ಮ್ಯಾನೇಜರ್ ಮೋಹನ್, ಡ್ರೈವರ್ ಮನ್ಸೂರ್ ಈ ಮೂವರ ವಿರುದ್ಧ ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹ ದಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.