ಬೆಂಗಳೂರು: ACB ಬಲೆ ಬೀಸಿದ BDA ಬ್ರೋಕರ್ಸ್ಗೆ ಮತ್ತೊಂದು ಆತಂಕ ಎದುರಾಗಿದ್ದು, BDA ಬ್ರೋಕರ್ಸ್ಗೆ ED ದಾಳಿಯ ಭೀತಿ ಶುರುವಾಗಿದೆ.
9 ಬ್ರೋಕರ್ಗಳ ಮೇಲೆ ನಿನ್ನೆ ACB ರೇಡ್ ಮಾಡಲಾಗಿತ್ತು. ಬ್ರೋಕರ್ಗಳು ಖಾಸಗಿ ವ್ಯಕ್ತಿಗಳಾಗಿರೋ ಕಾರಣ ACB BDAಗೆ ಸಂಬಂಧಿಸಿದ ದಾಖಲೆ ಮಾತ್ರ ವಶಕ್ಕೆ ಪಡೆದಿದ್ದರು. ACB ರೇಡ್ ವೇಳೆ ಅಪಾರ ಚಿನ್ನಾಭರಣ, ಸ್ಥಿರಾಸ್ತಿ ಪತ್ತೆಯಾಗಿದೆ. ಇದನ್ನೆಲ್ಲಾ ಮಹಜರ್ನಲ್ಲಿ ನಮೂದಿಸಿರುವ ACB ಅಧಿಕಾರಿಗಳು, ರಿಯಲ್ ಎಸ್ಟೇಟ್, ಬಿಡಿಎ ಬ್ರೋಕರ್ ಕೆಲಸ ಮಾಡಿ ಆಸ್ತಿ ಸಂಪಾದನೆ ಮಾಡಲಾಗಿದ್ದು, ರೇಡ್ ವೇಳೆ ಸಿಕ್ಕ ಫೈಲ್ ಪರಿಶೀಲಿಸುತ್ತಿರುವ ಹಿರಿಯ ಅಧಿಕಾರಿಗಳು, ಫೈಲ್ಗಳ ಪರಿಶೀಲನೆ ಬಳಿಕ EDಗೆ ಮಾಹಿತಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. Prevention of money landering act(PMLA) ಕಾಯ್ದೆ ಉಲ್ಲಂಘನೆ ಮಾಹಿತಿ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದ್ದು, EDಗೆ ಎಸಿಬಿ ಮಾಹಿತಿ ಕೊಟ್ಟರೆ 9 ಬ್ರೋಕರ್ಗಳಿಗೆ ಮತ್ತಷ್ಟು ಸಂಕಷ್ಟ ಶುರುವಾಗಲಿದೆ.
ಇದನ್ನೂ ಓದಿ:ವಾಹನ ಸವಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್..! ಕೆಲವೇ ದಿನಗಳಲ್ಲಿ ಟೋಲ್ ಕಿರಿಕಿರಿಗೆ ಸಿಗುತ್ತೆ ಮುಕ್ತಿ..!