ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣಗಳು ದಿನಕ್ಕೊಂದು ವಿವಾದಕ್ಕೆ ಕಾರಣವಾಗಿದ್ದು ,ಗುಂಬಜ್ ಮಾದರಿ ಬಸ್ ಶೆಲ್ಟರ್ಗೆ ಅನುಮತಿಯೇ ಸಿಕ್ಕಿರಲಿಲ್ಲ. KRIDL ನೀಡಿದ್ದ ವಿನ್ಯಾಸವೇ ಬೇರೆ, ಈಗ ನಿರ್ಮಿಸಿರೋದೇ ಬೇರೆಯಾಗಿದೆ. ವಿನ್ಯಾಸದ ಅಪ್ರೂವಲ್ ಆಗಿರೋ ಪ್ಲಾನ್ನಲ್ಲಿ ಗುಂಬಜ್ ಇರಲೇ ಇಲ್ಲ….
ಬಿಟಿವಿ ಬಳಿ ವಿವಾದಿತ ಬಸ್ ಶೆಲ್ಟರ್ನ ದಾಖಲೆಳಿದ್ದು, 2021ರಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಅನುಮತಿ ದೊರಕಿದೆ. ಅಸಿಸ್ಟೆಂಟ್ ಎಂಜಿನಿಯರ್ ವಿನ್ಯಾಸಕ್ಕೆ ಅನುಮತಿ ನೀಡಿದ್ದರು. KRIDLನ ಅನುಮತಿಯ ಮೊದಲ ಪ್ರತಿ ಬಿಟಿವಿಗೆ ಲಭ್ಯವಿದೆ. ರಾಮದಾಸ್ರಿಂದ 2022ರ ಫೆಬ್ರವರಿಯಲ್ಲಿ ಮತ್ತೊಂದು ಮನವಿ ಸಲ್ಲಿಸಲಾಗಿತ್ತು. ಶಾಸಕರ PA ಸಹಿ ಇರುವ ವಿನ್ಯಾಸದ ಪ್ರತಿ ಸಿಕ್ಕದ್ದು, ಸ್ಥಳೀಯ ಶಾಸಕರ ನಿಧಿಯಲ್ಲಿ ಹೆಚ್ಚುವರಿ ವೆಚ್ಛ ಭರಿಸೋದಾಗಿ ಮನವಿ ನೀಡಲಾಗಿದೆ.