PSI ಕೇಸ್ಗೆ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಇಡೀ CID ತನಿಖೆಗೇ ಸ್ಫೋಟಕ ತಿರುವು ನೀಡುವ ಸ್ಟೋರಿಯಾಗಿದೆ.
ಕೋರ್ಟ್ಗೆ ಶರಣಾಗೋ ಮುನ್ನ ಕಿಂಗ್ಪಿನ್ ಸ್ಫೋಟಕ ವಿಡಿಯೋ ಬಿಟ್ಟಿದ್ದಾರೆ. ತನಿಖಾಧಿಕಾರಿ ವಿರುದ್ಧವೇ 3 ಕೋಟಿ ಡೀಲ್ ಆರೋಪ ಮಾಡಲಾಗಿದ್ದು, ಆರ್ಡಿಪಿ PSI ಪರೀಕ್ಷಾ ನೇಮಕಾತಿ ಕೇಸ್ಗೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. RDP ಸಿಡಿಸಿರೋ ವಿಡಿಯೋದಲ್ಲಿ ಏನೇನಿದೆ..?ಯಾರು ಆ ತನಿಖಾಧಿಕಾರಿ..? 3 ಕೋಟಿ ಕೇಳಿದ್ರಾ..?ಆ ಆಡಿಯೋ ಸ್ಫೋಟವಾದ್ರೆ ಅಧಿಕಾರಿಗೆ ಕಂಟಕನಾ..? ಬಿಟಿವಿ ಬಳಿ ಇದೆ ಆರ್.ಡಿ.ಪಾಟೀಲ್ ಎಕ್ಸ್ಕ್ಲೂಸಿವ್ ವಿಡಿಯೋ ..
PSI ಪರೀಕ್ಷೆ ಕೇಸ್ನಲ್ಲಿ 3 ಕೋಟಿ ಬಾಂಬ್ ಸ್ಫೋಟವಾಗಿದ್ದು, ಕಿಂಗ್ಪಿನ್ R.D.ಪಾಟೀಲ್ ಜತೆ ನಡೆದಿತ್ತಾ 3 ಕೋಟಿ ಡೀಲ್.
CID ತನಿಖಾಧಿಕಾರಿ RDP ಬಿಡಲು 3 ಕೋಟಿ ಕೇಳಿದ್ರಾ, CID ತನಿಖಾಧಿಕಾರಿ, DySP ಶಂಕರಗೌಡ ಪಾಟೀಲ್ ವಿರುದ್ಧ ಆರೋಪ ಮಾಡಲಾಗಿದೆ. ಆರ್.ಡಿ.ಪಾಟೀಲ್ ಕೋರ್ಟ್ಗೆ ಶರಣಾಗೋ ಮುನ್ನ ವಿಡಿಯೋ ಬಿಟ್ಟಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ತನಿಖಾಧಿಕಾರಿ ಹಣ ಕೇಳಿದ್ದ ಆರೋಪ ಮಾಡಿದ್ದಾರೆ. 3 ಕೋಟಿ ಕೇಳಿದ್ರು.. ಈಗಾಗಲೇ 76 ಲಕ್ಷ ಕೊಟ್ಟಿದ್ದೇನೆ, ಹಣ ಕೇಳಿದ್ದಕ್ಕೆ ನನ್ನ ಬಳಿ ಆಡಿಯೋ ಇದೆ ಎಂದು ಆರೋಪವಿದೆ.
ಲೋಕಾಯುಕ್ತ, ಸಿಐಡಿ ಎಡಿಜಿಪಿ, ಎಡಿಜಿಪಿ ಅಲೋಕ್ ಕುಮಾರ್ , ಗೃಹ ಸಚಿವರಿಗೂ ರಿಜಿಸ್ಟರ್ ಪೋಸ್ಟ್ ಮಾಡಿರೋದಾಗಿ ಹೇಳಿದ್ದಾರೆ. ಕೇವಲ ನನ್ನಿಂದ ಮಾತ್ರವಲ್ಲ ಎಲ್ಲಾ ಆರೋಪಿಗಳಿಂದ ಹಣ ವಸೂಲಿ ಮಾಡಲಾಗಿದೆ, ತನಿಖೆ ವೇಳೆ ನಾನು ಯಾರನ್ನೂ ತಳ್ಳಿ ಪರಾರಿ ಆಗಿಲ್ಲ. ನಮ್ಮ ಜೊತೆ ರಾಜಿಯಾಗದಿದ್ರೆ ಬೇರೆ-ಬೇರೆ ಕೇಸ್ ಹಾಕೋದಾಗಿ ಬೆದರಿಸಿದ್ರು.ನನ್ನ ಅಳಿಯ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಬಳಿ ಹಣ ತಂದು ಕೊಟ್ಟಿದ್ದಾರೆ. ಅಳಿಯ ಶ್ರೀಕಾಂತ್ ಮೂಲಕ DySP ಶಂಕರಗೌಡ ಪಾಟೀಲ್ಗೆ 76 ಲಕ್ಷ ನೀಡಿದ್ದೆ. ಪಾಟೀಲ್ ಅಜ್ಞಾತ ಸ್ಥಳದಿಂದ ವಿಡಿಯೋ ಬಿಟ್ಟು ಕೋರ್ಟ್ಗೆ ಶರಣಾಗಿದ್ದಾನೆ.
ಆರ್.ಡಿ.ಪಾಟೀಲ್ ಬಳಿ ತನಿಖಾಧಿಕಾರಿ 3 ಕೋಟಿ ಕೇಳಿದ್ದು ನಿಜಾನಾ..?PSI ಅಕ್ರಮದ ಕಿಂಗ್ಪಿನ್ ಜತೆ ಡೀಲ್ ಮಾಡಿದ್ರಾ ತನಿಖಾಧಿಕಾರಿ..? PSI ಪರೀಕ್ಷೆ ಅಕ್ರಮ ಪ್ರಕರಣ ಭಾರೀ ತಿರುವು ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ : ಪಾಕ್ ಮೂಲದ ಯುವತಿ ಬೆಂಗಳೂರಿಗೆ ಕರೆತಂದ ಪ್ರಕರಣ… ನಾಲ್ಕು ವರ್ಷದ ಲವ್ ಸ್ಟೋರಿಯೇ ರೋಚಕ ಕಹಾನಿ…