ದೆಹಲಿ : ದೆಹಲಿಯಲ್ಲಿ ಮತ್ತೊಂದು ಹಾರರ್ ಮರ್ಡರ್ ನಡೆದಿದ್ದು, ಅಫ್ತಾಬ್ ಮಾದರಿಯಲ್ಲೇ ಮತ್ತೊಂದು ಕೊಲೆಯಾಗಿದೆ. ಈ ಬಾರಿ ಪೀಸ್ ಪೀಸ್ ಆಗಿದ್ದು ಪತ್ನಿಯಲ್ಲ ಪತಿಯಾಗಿದ್ಧಾರೆ.
ಈ ಘಟನೆ ದೆಹಲಿಯ ಪಾಂಡವನಗರದಲ್ಲಿ ನಡೆದಿದೆ. ಅಮ್ಮನ ಜತೆ ಸೇರಿ ಮಗನಿಂದಲೂ ಹತ್ಯೆಗೆ ಸಾಥ್ ಸಿಕ್ಕಿದ್ದು, ಅಂಜನ್ ದಾಸ್ ಎಂಬಾತನನ್ನು ಪತ್ನಿ ತುಂಡು ಮಾಡಿದ್ದಾಳೆ. ನಿದ್ದೆ ಮಾತ್ರೆ ನೀಡಿ ಅಂಜನ್ನನ್ನು ಕೊಲೆ ಮಾಡಿದ್ದಾರೆ. ಹಂತಕ ಪತ್ನಿ ತುಂಡು ಮಾಡಿ ಫ್ರಿಡ್ಜ್ನಲ್ಲಿ ಇಟ್ಟಿದ್ದಾಳೆ. ಪತ್ನಿ ಅಕ್ಷರ್ ಧಾಮ್ ಮುಂದಿನ ಮೈದಾನದಲ್ಲಿ ಮುಚ್ಚಿದ್ದಾಳೆ.
ಪೊಲೀಸರು ಜೂನ್ 5ರಂದು ಐದು ಪೀಸ್ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಅದಾದ ನಂತರ ವಿಶೇಷ ತಂಡ ರಚನೆ ಮಾಡಿ ತನಿಖೆ ಮಾಡಿದ್ಧಾರೆ. ರಾಮಲೀಲಾ ಮೈದಾನದಲ್ಲಿ ಎರಡು ಕಾಲು, ತಲೆಬುರುಡೆ, ಮೊಣಕೈ ಪತ್ತೆಯಾಗಿದೆ. ಶ್ರದ್ಧಾ-ಅಫ್ತಾಬ್ ಘಟನೆ ನಂತರ ಮತ್ತೊಂದು ಶಾಕಿಂಗ್ ಮರ್ಡರ್ ಆಗಿದೆ. ಪೀಸ್-ಪೀಸ್ ಮರ್ಡರ್ ಕೇಸ್ ದೆಹಲಿಯನ್ನೇ ಬೆಚ್ಚಿ ಬೀಳಿಸುತ್ತಿದೆ. ಹಣ, ಆಭರಣ ಕಿತ್ಕೊಂಡು ಪೀಡಿಸುತ್ತಿದ್ದ ಕಾರಣಕ್ಕೆ ಪತಿ ಮರ್ಡರ್ ಮಾಡಿದ್ದಾನೆ.
ಇದನ್ನೂ ಓದಿ :‘ಮೆಗಾ ಪವರ್ ಸ್ಟಾರ್’ ರಾಮ್ ಚರಣ್ ಅಭಿನಯದ ಹೊಸ ಪ್ಯಾನ್ ಇಂಡಿಯಾ ಚಿತ್ರ ಘೋಷಣೆ…!