ಬೆಂಗಳೂರು : ಸ್ಯಾಂಟ್ರೋ ರವಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಬೋಗಸ್ ಕೇಸ್ ಹಾಕಿದ್ದ ಇನ್ಸ್ಪೆಕ್ಟರ್ ಪ್ರವೀಣ್ಗೂ ಸಂಕಷ್ಟ ಬಂದಿದೆ.
ಸ್ಯಾಂಟ್ರೋ ರವಿ ಪತ್ನಿಯಿಂದ ಮತ್ತೊಂದು ಕಂಪ್ಲೇಂಟ್ ನೀಡಿದ್ದು, ಸ್ಯಾಂಟ್ರೋ ರವಿ, ಇನ್ಸ್ಪೆಕ್ಟರ್ ಪ್ರವೀಣ್ ಹೆಸರು ಉಲ್ಲೇಖಿಸಿ ಇಬ್ಬರ ಮೇಲೂ ಮತ್ತೊಂದು ದೂರು ಕೊಟ್ಟಿದ್ದಾರೆ. ಸ್ಯಾಂಟ್ರೋ ರವಿ ಪತ್ನಿ ಕಾಟನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನನ್ನ ಹಾಗೂ ನನ್ನ ತಂಗಿ ವಿರುದ್ದ ಬೋಗಸ್ ಕೇಸ್ ಹಾಕಿದ್ರು, 10ಕ್ಕೂ ಹೆಚ್ಚು ಪೊಲೀಸರು ಟಾರ್ಚರ್ ಕೊಟ್ಟು ಅರೆಸ್ಟ್ ಮಾಡಿದ್ರು, ಬಲವಂತವಾಗಿ ಬಂಧಿಸಿ, ನಮ್ಮಿಬ್ಬರ ಸ್ಟೇಟ್ಮೆಂಟ್ ಅವರೇ ಬರೆದುಕೊಂಡರು, ಮೈಸೂರಲ್ಲಿ ಬಂಧಿಸಿ ಬೆಂಗಳೂರಲ್ಲಿ ಅರೆಸ್ಟ್ ಅಂತಾ ತೋರಿಸಿದ್ರು. ಈ ಪ್ರಕರಣದಲ್ಲಿ ಇನ್ಸ್ ಪೆಕ್ಟರ್ ಪ್ರವೀಣ್ ಪಾತ್ರವೇ ಮುಖ್ಯವಾಗಿದ್ದಾನೆ. ಸ್ಯಾಂಟ್ರೋ ರವಿ ಮತ್ತು ಇನ್ಸ್ಪೆಕ್ಟರ್ ಮೇಲೆ ಕೇಸ್ ದಾಖಲಿಸಿ, ಲೀಗಲ್ ಒಪೀನಿಯನ್ ಪಡೆದು ಕೇಸ್ ದಾಖಲಿಗೆ ತಯಾರಿ ನಡೆದಿದೆ.