ಬೆಂಗಳೂರು: ಬೆಂಗಳೂರಿನಲ್ಲಿ ಕರ್ಫ್ಯೂ ರಾತ್ರಿಯಲ್ಲೇ ಮತ್ತೊಂದು ಕಾರ್ ಆಕ್ಸಿಡೆಂಟ್ ನಡೆದಿದೆ. ಇನೋವಾ ಕ್ರಿಸ್ಟಾ ಕಾರು ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದು ಕಾರು ಡ್ರೈವರ್ ಗಾಯಗೊಂಡಿದ್ದಾನೆ.
ಎರಡು ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಕಾರ್ನಲ್ಲಿದ್ದ ಇಬ್ಬರೂ ಸೇಫ್ ಆಗಿದ್ದಾರೆ. ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಕುಡಿದ ಅಮಲಿನಲ್ಲಿ ಸೆಲ್ಫ್ ಆಕ್ಸಿಡೆಂಟ್ ಆಗಿರೋ ಬಗ್ಗೆ ಶಂಕೆ ಇದೆ. ರಸ್ತೆ ಖಾಲಿಯಿದ್ದರೂ ಸೀದಾ ಬಂದು ಡಿವೈಡರ್ಗೆ ಕಾರ್ ಡಿಕ್ಕಿ ಹೊಡೆದಿದೆ. ಕಾರ್ನಲ್ಲಿದ್ದ ಇಬ್ಬರಿಗೂ ಮೆಡಿಕಲ್ ಚೆಕ್ ಮಾಡಿಸಿ ಡ್ರಂಕ್ ಅಂಡ್ ಡ್ರೈವ್ನಡಿ ಕೇಸ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.