ವಿಜ್ಞಾನಿಗಳ ನಿದ್ದೆಗೆಡಿಸಿದ್ದು ಅದೊಂದು ಪ್ರಾಣಿ..! ಫಾರೆನ್ಸಿಕ್ ಅಧಿಕಾರಿಗಳ ದಿಕ್ಕು ತಪ್ಪಿಸಿ ಸಿಂಹ ಸ್ವಪ್ನವಾಗಿದ್ದೂ ಇದೇ ಪ್ರಾಣಿ..! ಹಾಗಾದ್ರೆ ಆ ಪ್ರಾಣಿ ಅಧಿಕಾರಿಗಳ ದಿಕ್ಕು ತಪ್ಪಿಸಿದ್ದಾದ್ರೂ ಹೇಗೆ ಗೊತ್ತಾ..?
ಪ್ರತಿಯೊಬ್ಬ ವ್ಯಕ್ತಿ, ಪ್ರಾಣಿ ತನ್ನದೇ ಆದ ಯೂನಿಕ್ ಬೆರಳಚ್ಚನ್ನು ಹೊಂದಿರುತ್ತಾರೆ. ಹಾಗಾಗಿಯೇ ಬೆರಳಚ್ಚು ತಂತ್ರಜ್ಞಾನ ಸಹಾಯಕ್ಕೆ ಬರುವುದು. ಯಾವುದೇ ಅಪರಾಧವಾಗಿದ್ರೂ ಇದೊಂದು ತಂತ್ರಜ್ಞಾನ ಅಪರಾಧಿಗಳಿಗೆ ಕೆಟ್ಟ ಕನಸಿನಂತಿತ್ತು. ಹೀಗಿರುವಾಗ ಇದೊಂದು ಪ್ರಾಣಿಯ ಬೆರಳಚ್ಚು, ಬೆರಳಚ್ಚು ತಂತ್ರಜ್ಞಾನಕ್ಕೆ ಸೆಡ್ಡು ಹೊಡೆದಿತ್ತು.
ಒಂದು ಪ್ರಾಣಿಯು ಮನುಷ್ಯನ ಬೆರಳಚ್ಚಿನಂತೆಯೇ ಬೆರಳಚ್ಚು ಹೊಂದಿದೆ ಎಂದರೆ ಅದು ನಂಬಲಸಾಧ್ಯ ಅಲ್ವಾ..? ಇದೇ ಬೆರಳಚ್ಚಿನ ಸಾಮ್ಯತೆಯ ಕಾರಣದಿಂದಾಗಿ ಅದೆಷ್ಟೋ ಅಪರಾಧಿಗಳು ತಮ್ಮ ಅಪರಾಧವನ್ನು ಮುಚ್ಚಿಹಾಕಲು ಹೊಂಚುಹಾಕಿದ್ದು. ಅದೆಷ್ಟೋ ಬಾರಿ ನಿರಪರಾಧಿಗಳ ಮೇಲೆ ಅನುಮಾನ ಬರುವಂತಾಗಿದ್ದು. ಇದೇ ಬೆರಳಚ್ಚಿನ ಸಾಮ್ಯತೆಯಿಂದಾಗಿ ವಿಜ್ಞಾನಿಗಳು ದಾರಿ ತಪ್ಪಿದ್ದು. ಇಷ್ಟೊಂದು ವಿಶೇಷತೆ ಹೊಂದಿರುವ ಆ ಪ್ರಾಣಿ ಯಾವ್ದು ಗೊತ್ತಾ..? ಆ ಪ್ರಾಣಿಯೇ ಕೋಲಾ..! ಆಸ್ಟ್ರೇಲಿಯಾದಲ್ಲಿ ಕಂಡುಬರುವ ಈ ಸಸ್ಯಹಾರಿ ಪ್ರಾಣಿಯ ಬೆರಳಚ್ಚು ಮನುಷ್ಯನ ಬೆರಳಚ್ಚಿಗೆ ಹೊಂದಾಣಿಕೆಯಾಗುವುದು ಆಶ್ಚರ್ಯಕರ ಸಂಗತಿ.
ಅದೆಷ್ಟೋ ಘಟನೆಗಳಲ್ಲಿ ಕೋಲಾ ಮಾಡಿದ ಅವಾಂತರಗಳು ಮನುಷ್ಯನ ಮೇಲೆ ಅನುಮಾನ ಪಡುವಂತೆ ಮಾಡಿತ್ತು. ಪೊಲೀಸರನ್ನು ಪೇಚಿಗೀಡುಮಾಡಿತ್ತು. ಆದರೆ ಈಗ ಇದೇ ಬೆರಳಚ್ಚಿನ ಸಾಮ್ಯತೆ ಮನುಷ್ಯರು ಮಾಡುವ ಅಪರಾಧಗಳನ್ನೂ ಪ್ರಾಣಿಯ ಮೇಲೆ ಬರುವಂತೆ ಮಾಡಿದೆ. ಗೊಂಬೆಯಂತೆ ಕಾಣುವ ಕೋಲಾ ಇಂತಹ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮುಂದೊಮ್ಮೆ ಅಪರಾಧಗಳಿಗೆ ಯಾರೊಬ್ಬರನ್ನಾದರೂ ದೂರುವ ಮುನ್ನ ಕೋಲಾ ನಿಮ್ಮ ನೆನಪಿನಲ್ಲಿರಲಿ..!