ರಾತ್ರಿ 8 ಗಂಟೆ ಆಗೋಕೆ ಇನ್ನೂ 2 ನಿಮಿಷ ಇದ್ದಂತೆ ಫುಲ್ ಫ್ಯಾಮಿಲಿ ಕೂತು ನೋಡುವ ಗಟ್ಟಿಮೇಳ ಸಿರೀಯಲ್ನಲ್ಲಿ ಮಹಾಬದಲಾವಣೆ ಆಗಲಿದೆ. ನಾವ್ ಗೊತ್ತಲ್ಲ ರೌಡಿ ಬೇಬಿ ಅಂತ ಅಮೂಲ್ಯ ಪಾತ್ರದಲ್ಲಿ ನಟಿಸುತ್ತಿದ್ದ ನಿಶಾ ರವಿಕೃಷ್ಣನ್ ಗಟ್ಟಿಮೇಳದಿಂದ ಹೊರ ಬಂದಿದ್ದಾರೆ ಅನಿಸುತ್ತಿದೆ. ಅರೆ ಅದ್ ಹೆಂಗ್ ಹೇಳ್ತೀರ ಅಂತ ಕೇಳ್ತಿದ್ದೀರ..? ಇವತ್ತಿನ ಎಪಿಸೋಡ್ ಪ್ರೋಮೋ ನೋಡಿದ್ರೆ ನಾವ್ ಹೇಳ್ತಿರೋದು 100 ರಲ್ಲಿ 80% ಸತ್ಯ ಹೌದು ಅಂತನಿಸಬಹುದು..
View this post on Instagram
ಅಮೂಲ್ಯ ಯಾರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ ಗಟ್ಟಿಮೇಳದ ಪ್ರತಿಯೊಂದು ಎಪಿಸೋಡ್ಗಳನ್ನ ನೀವು ಕೂಡ ಮಿಸ್ ಮಾಡ್ದೆ ನೋಡ್ಕೊಂಡು ಬಂದಿದ್ದೀರ. ಹೀಗಿರುವಾಗ ಕಿಡ್ನ್ಯಾಪ್ ಆಗಿರೋ ಅಮ್ಮುನಾ ಡೈರೆಕ್ಟ್ ಆಗೆ ತೋರಿಸಬಹುದಿತ್ತು.. ಆದ್ರಿಲ್ಲಿ ಅಮ್ಮು ಮುಖವನ್ನ ರಿಲೀವ್ ಮಾಡ್ದೆ ಸಸ್ಪೆನ್ಸೀವ್ ಆಗಿ ತೋರಿಸಿದ್ದಾರೆ..
ಅಮ್ಮು ವೇದಾಂತ್ ಲವ್ ಸ್ಟೋರಿ ಅಂಗೋ ಹಿಂಗೋ ಸಕ್ಸಸ್ ಆಗಿ, ಮದುವೆ ಡೇಟ್ ಕೂಡ ಫಿಕ್ಸ್ ಆಗಿ, ಮದುವೆಗೆ ತನ್ನ ಫ್ರೆಂಡ್ನ ಕರೆಯೋಕೆ ಹೋದಾಗ ಅಮೂಲ್ಯ ಕಿಡ್ನ್ಯಾಪ್ ಆಗಿದ್ದಾಳೆ. ಅಂದ್ಹಾಗೇ ನಿಮ್ಮೆಲ್ಲರಿಗೂ ವೇದಂತ್ ಹೆತ್ತ ತಾಯಿ ಎಂಟ್ರಿ ಆಗಿರೋ ಬಗ್ಗೆ ಗೊತ್ತೇ ಇದೆ. ಸಾಕು ತಾಯಿ ಸುಹಾಸಿನಿ ವೇದಂತ್ ನ ನಿಜವಾದ ತಾಯಿಯನ್ನು ಬಚ್ಚಿಟ್ಟ ಜಾಗದಲ್ಲೇ ಅಮೂಲ್ಯರನ್ನು ಇಟ್ಟಿದ್ದಾರೆ.
ಅಂದ್ಹಾಗೇ ಇನ್ನು ವೇದಾಂತ್ನ ನಿಜವಾದ ತಾಯಿ ಪಾತ್ರದಲ್ಲಿ ನಟಿಸುತ್ತಿರುವವರು ಯಾರು ಅನ್ನೋದ್ರ ಬಗ್ಗೆ ರಿವೀಲ್ ಮಾಡಿಲ್ಲ.. ಇನ್ನೊಂದು ಕಡೆ ಅಮೂಲ್ಯ ಪಾತ್ರಕ್ಕೆ ಹೊಸ ನಟಿ ಎಂಟ್ರಿ ಆಗ್ತಿದ್ದಾರೆ ಅನ್ನೋ ರೀತಿ ಕ್ಲೂ ಕೊಟ್ಟಿದ್ದಾರೆ ಗಟ್ಟಿಮೇಳ ತಂಡ.. ಮನದರಸಿಯ ಹುಡುಕಾಟದಲ್ಲಿರುವ ವೇದಾಂತ್ ಗೆ ತನ್ನ ತಾಯಿಯ ದರ್ಶನವಾಗತ್ತಾ? ಅನ್ನೋ ಇವತ್ತಿನ ಎಪಿಸೋಡ್ನಲ್ಲಿ, ವೇದಂತ್ಗೆ ಅಮ್ಮು ಸಿಕ್ಕಿದ್ರೆ ಹೊಸ ಎಂಟ್ರಿ ಬಗ್ಗೆ ತಿಳಿಯುತ್ತೆ.
ಇಲ್ಲ ಅಂದ್ರೆ ವೇದಂತ್ ಮದುವೆ ದಿನ ಈ ಎರಡು ಪಾತ್ರಗಳು ಮುಖ ರಿವೀಲ್ ಆಗ್ಬೋದು ಅನಿಸುತ್ತೆ.. ಏನೇ ಆದ್ರು ಇಷ್ಟು ದಿನ ನಿಶಾ ರವಿಕೃಷ್ಣನ್ ಅವರನ್ನ ಅಮೂಲ್ಯ ಪಾತ್ರದಲ್ಲಿ ನೋಡಿ, ಸಿಕ್ಕಾಪಟ್ಟೆ ಇಷ್ಟ ಪಟ್ಟು ರೌಬಿ ಬೇಬಿಗೆ ಕನೆಕ್ಟ್ ಆಗಿದ್ದ ಗಟ್ಟಿಮೇಳ ಸೀರಿಯಲ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಬೇಜಾರ್ ಆಗೋದ್ರಲ್ಲಿ ನೋ ಡೌಟ್..
View this post on Instagram
ಇನ್ನೂ ಇಷ್ಟು ಒಳ್ಳೆ ಸೀರಿಯಲ್ ಬಿಟ್ಟು ಯಾಕ್ ಹೋಗ್ತಾರೆ ನಿಶಾ ರವಿಕೃಷ್ಣನ್ ಅನ್ನೋ ಪ್ರಶ್ನೆ ನಿಮಗೆ ಕಾಡ್ತಿದ್ರೆ, ಅವರಿಗೆ ಟಾಲಿವುಡ್ನಿಂದ ಸಿಕ್ಕಾಪಟ್ಟೆ ಆಫರ್ಸ್ಗಳು ಬರ್ತಿವೆ ಆಂತೆ.. ತೆಲುಗಿನ ಒಂದು ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ ನಿಶಾ…