ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಜನವರಿ 15ರಿಂದ ದೇಶಾದ್ಯಂತ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ. ರಾಜ್ಯ ರಾಷ್ಟ್ರದ ಗಣ್ಯ ವ್ಯಕ್ತಿಗಳು ಕೂಡ ರಾಮ ಮಂದಿರ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ರಾಜಕಾರಣಿಗಳು, ನಟ- ನಟಿಯರು, ರಾಮ ಭಕ್ತರು, ಉದ್ಯಮಿಗಳೆಲ್ಲರು ದೇಣಿಗೆ ನೀಡಿದ್ದಾರೆ. ಇದೀಗ ಕನ್ನಡ ನಟಿ ಅಮೂಲ್ಯ ಜಗದೀಶ್ ಮಂದಿರ ನಿರ್ಮಾಣಕ್ಕೆ ಎರಡುವರೆ ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಣದ ರಶೀದಿಗಳನ್ನು ಹಂಚಿಕೊಂಡಿರುವ ಅಮೂಲ್ಯ ಮತ್ತು ಜಗದೀಶ್, ‘ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ದೇಶಾದ್ಯಂತ ನಡೆಯುತ್ತಿದ್ದು, ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಿಮಿತ್ತ ನಮ್ಮ ಮನೆಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣ್ ಕುಮಾರ್ ಜೀ ರವರು ಆಗಮಿಸಿದ್ದರು. ಪ್ರತಿ ವರ್ಷವೂ ಜನ್ಮದಿನಾಚರಣೆಗಾಗಿ ವ್ಯಯಿಸುತ್ತಿದ್ದ ಮೊತ್ತಕ್ಕೆ ನಮ್ಮಿಂದಾದ ಮೊತ್ತವನ್ನು ಸೇರಿಸಿ ಪ್ರಭು ಶ್ರೀರಾಮ ಮಂದಿರಕ್ಕಾಗಿ ಅರ್ಪಿಸಿದೆವು. ಈ ಕ್ಷಣ ನಮಗೆ ಅತ್ಯಂತ ಸಾರ್ಥಕತೆಯ ಕ್ಷಣವೆನಿಸಿತು… ಜೈ ಶ್ರೀರಾಮ್..’ ಎಂದು ಬರೆದುಕೊಂಡಿದ್ದಾರೆ.