ತೀವ್ರ ಉಸಿರಾಟದ ಸಮಸ್ಯೆಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅಮಿತ್ ಶಾ ಕಳೆದ 2 ವಾರಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಹೊಂದಿದ್ದರು.
ನಿನ್ನೆ ತಡ ರಾತ್ರಿ ಸುಮಾರು 11 ಗಂಟೆಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಅಮಿತ್ ಶಾ ರವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ಮೇಘನಾ ರಾಜ್ ನಿವಾಸದಲ್ಲಿ ಮನೆಮಾಡಿದ ಸಂಭ್ರಮ..!
ಆಗಸ್ಟ್ 2ರಂದು ಕೊರೋನಾ ಪಾಸಿಟಿವ್ನಿಂದಾಗಿ ಅಮಿತ್ ಶಾ ಚಿಕಿತ್ಸೆ ಪಡೆಯುತ್ತಿದ್ರು. ಗುರುಗ್ರಾಮ್ ನ ಮೇದಾಂತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮತ್ತೆ ಅವರಿಗೆ ಸಮಸ್ಯೆ ತಲೆದೋರಿತ್ತು. ನಂತರ ಆಗಸ್ಟ್ 18ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ರು. ಆಗಲೂ ಅವರಿಗೆ ಉಸಿರಾಟದ ಸಮಸ್ಯೆ ತಲೆದೋರಿತ್ತು.
ಇದೀಗ ಕೊರೋನಾದಿಂದ ಚೇತರಿಸಿಕೊಂಡ ಬಳಿಕ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ.
ಅಮಿತ್ ಶಾ ಏಮ್ಸ್ ನ ಕಾರ್ಡಿಯೊ ನ್ಯೂರೊ ವಿಭಾಗಕ್ಕೆ ದಾಖಲಿಸಲಾಗಿದೆ. ಏಮ್ಸ್ ನಿರ್ದೇಶಕ ಡಾ ರಂದೀಪ್ ಗುಲೆರಿಯಾ ಅವರು ಅಮಿತ್ ಶಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಪರಿಸ್ಥಿತಿ ಸದ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.