ಕೊರೋನಾ ಸೋಂಕಿಗೆ ಒಳಗಾಗಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಹೇಳಿದ್ದೇನು ಗೊತ್ತಾ? ಮುಂಬಯಿನಲ್ಲಿರುವ ನಾನಾವಟಿ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿರುವ ಅಮಿತಾಬ್ ಬಚ್ಚನ್ ಏನ್ ಟ್ವೀಟ್ ಮಾಡಿದ್ದಾರೆ ಗೊತ್ತಾ?
ಕೊರೋನಾ ಪಡೆಯುತ್ತಿರುವ ಸಮಯದಲ್ಲಿ ತಮ್ಮ ಟ್ವೀಟರ್ ಖಾತೆಯಲ್ಲಿ ಸಂಸ್ಕೃತ ಭಾಷೆಯಲ್ಲಿ ಸುಭಾಷಿತ ಒಂದನ್ನ ಟ್ವೀಟ್ ಮಾಡಿದ್ದಾರೆ. ಜೀವನದಲ್ಲಿ ಅತೃಪ್ತಿ, ಕೋಪ, ಅನುಮಾನ, ಸ್ವಾರ್ಥ, ಇಷ್ಟಪಡದಿರುವುದು, ಕೇವಲ ಇತರಿಗಾಗಿಯೇ ಬದುಕುವ ಮನಸ್ಥಿತಿಯನ್ನು ಹೊಂದಿರುವವರು ತಮ್ಮ ಇಡೀ ಜೀವನದಲ್ಲಿ ದುಃಖದೊಂದಿಗೆ ಕಾಲ ಕಳೆಯುತ್ತಾರೆ. ಅವರಿಗೆ ನೆಮ್ಮದಿ ಸಂತೋಷದ ಜೀವನ ದೊರಕುವುದಿಲ್ಲ. ಇಂತಹ ಮನಸ್ಥಿತಿಯನ್ನು ಬದುಕಿನಲ್ಲಿ ಬೆಳೆಸಿಕೊಳ್ಳಬಾರದು. ಹಾಗೆಯೇ ಇಂತಹ ಸ್ವಭಾವದ ವ್ಯಕ್ತಿಗಳಿಂದ ದೂರ ಇರಬೇಕೆಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಅಮಿತಾಬ್ ಪತ್ನಿ ನಟಿ ಜಯಾ ಬಚ್ಚನ್ ಹೊರತುಪಡಿಸಿ ಬಚ್ಚನ್ ಕುಟುಂಬದ ಎಲ್ಲಾ ಸದಸ್ಯರಿಗೂ ಕೊರೋನಾ ಸೋಂಕು ತಗುಲಿತ್ತು. ನಟ ಅಭಿಷೇಕ್ ಬಚ್ಚನ್, ನಟಿ ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ಬಿಗ್ ಬಿ ಮೊಮ್ಮಗಳು ಆರಾಧ್ಯ ಬಚ್ಚನ್ಗೂ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲೂ ಅಮಿತಾಬ್ ಜೀವನೋತ್ಸಹ ಕಂಡು ಬಾಲಿವುಡ್ ಹುಬ್ಬೇರಿಸಿದೆ.