ಬೆಂಗಳೂರು: ಆರ್.ಅಶೋಕ್ ಅಮಿತ್ ಶಾ ಭೇಟಿಯಾಗಿದ್ದು, ಭೇಟಿ ಬಳಿಕ ಸೀದಾ ಮಳೆ ಪೀಡಿತ ಪ್ರದೇಶಕ್ಕೆ ಅಶೋಕ್ ತೆರಳಿದ್ದಾರೆ.
ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳಿಗೆ ಅಶೋಕ್ ಭೇಟಿ ನೀಡಲಿದ್ದು, ಅಧಿಕಾರಿಗಳ ತಂಡದ ಜೊತೆಗೆ ಜಿಲ್ಲೆಗಳತ್ತ ಆರ್.ಅಶೋಕ್ ಹೊರಟಿದ್ದಾರೆ. ಹಿರಿಯ IAS-KAS ಅಧಿಕಾರಿಗಳ ಜೊತೆಗೆ ಆರ್.ಅಶೋಕ್ ತೆರಳಿದ್ದಾರೆ. ಮಂಡ್ಯ ಜಿಲ್ಲೆಯ ವಿವಿಧೆಡೆ ಮಳೆ ಹಾನಿ ಪರಿಶೀಲನೆ ನಡೆಸಲಿದ್ದು, ಕೆ.ಆರ್.ಪೇಟೆ, ನಾಗಮಂಗಲ ಸೇರಿ ವಿವಿಧೆ ಹಾನಿ ವೀಕ್ಷಣೆ ಮಾಡಲಿದ್ದಾರೆ. ನಾಗಮಂಗಲ ಬಳಿಕ ಹಾಸನ ಜಿಲ್ಲೆಗೆ ಭೇಟಿ ನೀಡುವ ಅಶೋಕ್,
ಶ್ರವಣಬೆಳಗೊಳದಲ್ಲಿ ಮಳೆ ಹಾನಿ ಮಾಹಿತಿ ಪಡೆಯಲಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆಗೆ ಸ್ಥಳದಲ್ಲೇ ಚರ್ಚೆ ಮಾಡಲಿದ್ದಾರೆ.
ಇದನ್ನೂ ಓದಿ:ಕಣ್ವ ನೀರಿನ ಅಬ್ಬರಕ್ಕೆ ರಾಮನಗರ ಕಂಗಾಲ್..! ನೀರಿನ ರಭಸಕ್ಕೆ ಕೊಚ್ಚಿ ಹೋದ ಸೇತುವೆ…