ಬೆಂಗಳೂರು : ರಾಜ್ಯಕ್ಕೆ ಅಮಿತ್ ಶಾ ಭೇಟಿ ಹಿನ್ನೆಲೆ ಬೆಂಗಳೂರು ಅಲರ್ಟ್ ಆಗಿದ್ದು, ಪೊಲೀಸರು ಅಮಿತ್ ಶಾಗೆ ಭಾರೀ ಭದ್ರತೆ ಕಲ್ಪಿಸಿದ್ಧಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಯಾವುದೇ ಪ್ರತಿಭಟನೆ, ಧರಣಿ ಬಿಸಿ ತಟ್ಟದಂತೆ ಅಲರ್ಟ್ ಮಾಡಲಾಗಿದೆ.
ಇತ್ತೀಚೆಗಷ್ಟೇ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಕಾರ್ಯಕರ್ತರು ನುಗ್ಗಿದ್ದರು. ಇಂಥಾ ಲೋಪ ಆಗದಂತೆ ಬೆಂಗಳೂರು ಪೊಲೀಸರು ಎಚ್ಚರಿಕೆ ವಹಿಸಿದ್ಧಾರೆ. ಅಮಿತ್ ಶಾಗೆ ಝಡ್ ಪ್ಲಸ್ ಭದ್ರತೆ ಇದ್ದರೂ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ.
ತಾಜ್ ವೆಸ್ಟ್ಎಂಡ್ ಸುತ್ತಮುತ್ತ ಭಾರೀ ಪೊಲೀಸ್ ಭದ್ರತೆ ಮಾಡಲಾಗಿದೆ. 2500ಕ್ಕೂ ಹೆಚ್ಚು ಪೊಲೀಸರು ಅಮಿತ್ ಶಾ ಬಂದೋಬಸ್ತ್ಗೆ ನಿಯೋಜನೆ, 7 ಮಂದಿ DCP, 18 ಎಸಿಪಿ, 53 ಇನ್ಸ್ಪೆಕ್ಟರ್,147ಸಬ್ ಇನ್ಸ್ ಪೆಕ್ಟರ್, 180 ASI, 1162 ಹೆಡ್ ಕಾನ್ಸ್ಟೇಬಲ್,15 KSRP ಬೆಟಾಲಿಯನ್ ಬಳಕೆ ಮಾಡಲಾಗಿದೆ.
ಇದನ್ನೂ ಓದಿ : ಊಟದ ನೆಪದಲ್ಲಿ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರ ಜೊತೆ ಸಭೆ..! ಅಮಿತ್ ಶಾ ರಾಜ್ಯ ಭೇಟಿ ಹಿಂದಿದೆಯಾ ಮೆಗಾ ಪ್ಲಾನ್..!