ಬೆಂಗಳೂರು: ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಇದ್ದಾರೆ, ಅವರಿಗೆ ಪ್ರಶ್ನೆ ಕೇಳಲು ಬಯಸುತ್ತೇನೆ. ರಾಜ್ಯದಲ್ಲಿ 40% ಕಮಿಷನ್ ಬಿಜೆಪಿ ಸರ್ಕಾರ ಇದೆ. ಸಿಎಂ ಮತ್ತು ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ, ಅದರ ಬಗ್ಗೆ ಅಮಿತ್ ಶಾ ಮಾತನಾಡಬೇಕು ಎಂದು ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಪ್ರಧಾನಿ ಮತ್ತು ಅಮಿತ್ ಶಾ ಭ್ರಷ್ಟಾಚಾರ ನಿಗ್ರಹಕ್ಕೆ ಏನು ಕ್ರಮ ತೆಗೆದುಕೊಂಡಿದ್ದಾರೆ. ಅಮಿತ್ ಶಾ ಭ್ರಷ್ಟಾಚಾರ ಕ್ರಮದ ಬಗ್ಗೆ ಮಾತನಾಡಬೇಕು. ಸಚಿವರು ಬೇಲ್ ಮೇಲೆ ಇದ್ದಾರೆ ಅದರ ಬಗ್ಗೆ ಶಾ ಮಾತನಾಡಲಿ. ಇಲ್ಲಿಯವರೆಗೆ ಯಾವುದೇ ಕ್ರಮ ಬಿಜೆಪಿ ತೆಗೆದುಕೊಂಡಿಲ್ಲ, ಭ್ರಷ್ಟ ಜನತಾ ಪಾರ್ಟಿಯಾಗಿ ಬಿಜೆಪಿ ಬದಲಾಗಿದೆ. ಅಮಿತ್ ಶಾ ರಾಜ್ಯದ ಪ್ರವಾಸ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಕ್ರಮದ ಬಗ್ಗೆ ಅಮಿತ್ ಶಾ ಸ್ಪಷ್ಟನೆ ನೀಡಲಿ, ಇಲ್ಲದೆ ಹೊದ್ರೆ ಭ್ರಷ್ಟಾಚಾರ ಮಾಡಿದ್ದೇವೆ ಅಂತ ಒಪ್ಪಿಕೊಳ್ಳಲಿ ಎಂದು ಅಮಿತ್ ಶಾ ಮತ್ತು ಬಿಜೆಪಿ ವಿರುದ್ಧ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಇಂದಿನಿಂದ ಮುಂಬೈನಲ್ಲಿ ಮಾಸ್ಕ್ ಕಡ್ಡಾಯವಲ್ಲ…! ಮುಂಬೈ ಮಹಾನಗರ ಪಾಲಿಕೆ ಘೋಷಣೆ..!