ವಾಷಿಂಗ್ಟನ್ : ವಿಶ್ವದ ಹಲವು ರಾಷ್ಟ್ರಗಳಲ್ಲಿ ಓಮಿಕ್ರಾನ್ ಅನ್ನೋ ಹೊಸ ವೈರಸ್ ಸಂಚಲನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಆತಂಕದಲ್ಲಿ ಇರುವ ಹೊತ್ತಲ್ಲೇ ಅಮೆರಿಕದ ನೆಲ ಕೂಡ ಶೇಕ್ ಆಗಿದೆ.
ಅಮೆರಿಕಕ್ಕೂ ಡೆಡ್ಲಿ ಓಮಿಕ್ರಾನ್ ಎಂಟ್ರಿ ಕೊಟ್ಟಿದ್ದು, ಅಮೆರಿಕದ ಕ್ಯಾಲಿಫೋರ್ನಿಯಾ ವ್ಯಕ್ತಿಯಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಓಮಿಕ್ರಾನ್ ಕೇಸ್ ಪತ್ತೆ ಆಗ್ತಿದ್ದಂತೆ ದೊಡ್ಡಣ್ಣನ ನೆಲ ಶೇಕ್ ಆಗಿದೆ. ದಕ್ಷಿಣ ಆಫ್ರಿಕಾದಿಂದ ವಾಪಸ್ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದ್ದು, ಅಮೆರಿಕ ಮಾತ್ರವಲ್ಲದೆ ಜಪಾನ್ನಲ್ಲೂ ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಈವರೆಗೆ ಜಪಾನ್ನಲ್ಲಿ ಮೂವರಲ್ಲಿ ಹೊಸ ಸೋಂಕು ಬಂದಿದ್ದು ವಿಶ್ವದ 20ಕ್ಕೂ ಹೆಚ್ಚು ದೇಶಗಳಲ್ಲಿ ಹೊಸ ಸೋಂಕು ಓಮಿಕ್ರಾನ್ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅಮೆರಿಕಾ ಮತ್ತು ಜಪಾನ್ನಲ್ಲೂ ಭಾರೀ ಆತಂಕ ಶುರುವಾಗಿದೆ.
ಇದನ್ನು ಓದಿ.ಯಶವಂತಪುರದಲ್ಲಿ ಟೀ ಕುಡಿಯೋ ನೆಪದಲ್ಲಿ ಬಂದು ಮೊಬೈಲ್ ಕಳ್ಳತನ…! ಸಿಸಿಟಿವಿಯಲ್ಲಿ ಕಳ್ಳನ ಕೈಚಳಕ ಸೆರೆ…!