ಬೆಂಗಳೂರು : ಅಂಬೇಡ್ಕರ್ ಅಭಿವೃದ್ಧಿ ನಿಗಮದ MD ಸಸ್ಪೆಂಡ್ ಆಗಿದ್ದಾರೆ. ಸರ್ಕಾರ ಭ್ರಷ್ಟಾಚಾರ ಆರೋಪದಡಿ ಅಮಾನತು ಮಾಡಿದೆ.
ಕೆ.ಎಂ. ಸುರೇಶ್ ಕುಮಾರ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, 25 ಕೋಟಿ ಅಕ್ರಮ ಎಸಗಿದ ಆರೋಪದ ಮೇಲೆ ಅಮಾನತು ಆಗಿದ್ದಾರೆ. ಭ್ರಷ್ಟಾಚಾರ, ದುರ್ನಡತೆ ಮತ್ತು ಕರ್ತವ್ಯಲೋಪ ಆರೋಪ, ಇಲಾಖಾ ವಿಚಾರಣೆ ಬಾಕಿ ಇರಿಸಿ KAS (ಆಯ್ಕೆ ಶ್ರೇಣಿ) ಅಧಿಕಾರಿ ಸಸ್ಪೆಂಡ್ ಆಗಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಅಮಾನತುಗೊಳಿಸಿದ್ದಾರೆ. ಅರ್ಜಿಯನ್ನೇ ಸಲ್ಲಿಸದ 92 ಫಲಾನುಪೇಕ್ಷಿಗಳಿಗೆ ಸೌಲಭ್ಯ ನೀಡಿದ ಆರೋಪವಿದ್ದು, ಐರಾವತ ಮತ್ತು ಸಮೃದ್ಧಿ ಯೋಜನೆಗಳಲ್ಲಿ ಅರ್ಜಿ ಹಾಕದವರಿಗೆ ಮಂಜೂರಾತಿ ಮಾಡಿದ್ದರು. ಗಂಗಾ ಕಲ್ಯಾಣ ಯೋಜನೆಯಡಿ ಜಿಎಸ್ಟಿ ಮೊತ್ತ ಅಕ್ರಮವಾಗಿ ನೀಡಿ 3.5 ಕೋಟಿ ನಷ್ಟವಾಗಿದೆ. ಶಾಸಕರ ಅನುಮೋದನೆ ಇಲ್ಲದೇ 5000 ಮಂದಿ ಆಯ್ಕೆ ಮಾಡಿ 25 ಕೋಟಿ ನಷ್ಟವಾಗಿದೆ. ಹಲವು ಅಕ್ರಮ ಮಾಡಿರುವ ಆರೋಪದಡಿ ಸುರೇಶ್ಕುಮಾರ್ ಸಸ್ಪೆಂಡ್ ಆಗಿದ್ದಾರೆ.
ಇದನ್ನೂ ಓದಿ : ತಿ.ನರಸೀಪುರ ತಾಲೂಕಿನಲ್ಲಿ ನಿಲ್ಲದ ಚಿರತೆ ಹಾವಳಿ… 11ವರ್ಷದ ಯುವಕನನ್ನ ಬಲಿ ಪಡೆದು ದೇಹವನ್ನು ಹೊತ್ತೊಯ್ದಿರುವ ಚಿರತೆ…