ಲಖನೌ: ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಗಳನ್ನು ಬಳಸುವುದು ಮೂಲಭೂತ ಹಕ್ಕಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದ್ದು, ಮಸೀದಿಯಲ್ಲಿ ಲೌಡ್ ಸ್ಪೀಕರ್ ಅಳವಡಿಸಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ: ಮೈಸೂರು ಬೆನ್ನಲ್ಲೇ ಮಂಡ್ಯದಲ್ಲೂ ಪಾಕ್ ಪರ ಘೋಷಣೆ… ರಂಜಾನ್ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದ ಕಿಡಿಗೇಡಿಗಳು…
2021 ರ ಡಿಸೆಂಬರ್ 3 ರಂದು ಬದೌನ್ ಜಿಲ್ಲೆಯ ಬಿಸೌಲಿ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಅವರು ಡೋಂಗರ್ ಪುರ ಗ್ರಾಮದ ನೂರಿ ಮಸೀದಿಯಲ್ಲಿ ಲೌಡ್ ಸ್ಪೀಕರ್ ಅಳವಡಿಸಿ ಆಜಾನ್ ಪ್ರಸಾರ ಮಾಡಲು ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಇರ್ಫಾನ್ ಎಂಬುವವರು ಹೈಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿವೇಕ್ ಕುಮಾರ್ ಬಿರ್ಲಾ ಮತ್ತು ನ್ಯಾಯಮೂರ್ತಿ ವಿಕಾಸ್ ಪಸ್ಸೆದ್ ಅವರಿದ್ದ ಪೀಠ ‘ಮಸೀದಿಯಲ್ಲಿ ಲೌಡ್ ಸ್ಪೀಕರ್ ಅಳವಡಿಸುವುದು ಮೂಲಭೂತ ಹಕ್ಕು ಎಂದು ಕಾನೂನು ಹೇಳಿಲ್ಲ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: “ಗರುಡ ಗಮನ ವೃಷಭ ವಾಹನ” ಸಿನಿಮಾ ನೋಡಿ ಕಿಚ್ಚ ಫಿದಾ…! ಸುದೀರ್ಘ ಪತ್ರ ಬರೆದು ಚಿತ್ರವನ್ನು ಕೊಂಡಾಡಿದ ಅಭಿನಯ ಚಕ್ರವರ್ತಿ..!
ಇರ್ಫಾನ್ ತಮ್ಮ ಅರ್ಜಿಯಲ್ಲಿ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಅವರ ಆದೇಶ ಕಾನೂನು ಬಾಹಿರವಾಗಿದ್ದು, ಇದು ಮೂಲಭತ ಹಕ್ಕುಗಳು ಮತ್ತು ಕಾನೂನಾತ್ಮಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮಸೀದಿಯಲ್ಲಿ ಲೌಡ್ ಸ್ಪೀಕರ್ ಅಳವಡಿಸುವುದು ಮೂಲಭೂತ ಹಕ್ಕಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಉತ್ತರ ಪ್ರದೇಶ ಸರ್ಕಾರವು ರಾಜ್ಯಾದ್ಯಂತ ಅನಧಿಕೃತವಾಗಿ ಅಳವಡಿಸಿರುವ ಲೌಡ್ ಸ್ಪೀಕರ್ ಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ಈಗಾಗಲೇ ಸಾವಿರಾರು ಲೌಡ್ ಸ್ಪೀಕರ್ ಗಳನ್ನು ತೆರವುಗೊಳಿಸಲಾಗಿದೆ. ಜೊತೆಗೆ ಮಂದಿರ ಮತ್ತು ಮಸೀದಿಗಳು ಸೇರಿ 17 ಸಾವಿರ ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ನ ವಾಲ್ಯೂಮ್ ಅನ್ನು ಕಡಿಮೆ ಇಡಲಾಗಿದೆ.
ಇದನ್ನೂ ಓದಿ: ಇಡೀ ಊರಿಗೆ ಆಜಾನ್, ಮಂತ್ರ ಭಜನೆ ಕೇಳಬೇಕಾಗಿಲ್ಲ… ಧರ್ಮಕೇಂದ್ರದ ಬಳಿ ಬಂದವರಿಗೆ ಕೇಳಿದರೆ ಸಾಕು: ರಘುಪತಿ ಭಟ್…