ಬೆಂಗಳೂರು: ಗೋವಾದಲ್ಲಿ ಸಮ್ಮರ್ ಸಾಲ್ಟ್ ಮಾಡಲು ಹೋಗಿ ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿರುವ ನಟ ದಿಗಂತ್ ಅವರ ಆರೋಗ್ಯ ಪರಿಸ್ಥಿತಿ ಕುರಿತು ದಿಗಂತ್ ಪತ್ನಿ ಐಂದ್ರಿತಾ ರೇ ಮಾಹಿತಿ ನೀಡಿದ್ಧಾರೆ.
ಮಣಿಪಾಲ್ ಆಸ್ಪತ್ರೆ ಬಳಿ ಮಾಧ್ಯಮದವರಿಗೆ ದಿಗಂತ್ ಆರೋಗ್ಯದ ಕುರಿತು ಮಾಹಿತಿ ನೀಡಿದ ಐಂದ್ರಿತಾ ‘ಸರ್ಜರಿ ಯಶಸ್ವಿಯಾಗಿದ್ದು, ದಿಗಂತ್ ಚೇತರಿಸಿಕೊಳ್ಳುತ್ತಿದ್ದಾರೆ. ಡಾಕ್ಟರ್ ಬಳಿ ನಾನು ಸಮ್ಮರ್ ಸಾಲ್ಟ್ ಮಾಡೋಕೆ ರೆಡಿ ಇದ್ದೇನೆ ಎಂದು ತಿಳಿಸಿದ್ದಾರೆ. ಅಷ್ಟರ ಮಟ್ಟಿಗೆ ದಿಗಂತ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿಸಿದ್ಧಾರೆ.
ಇನ್ನು ನಾನು ಮತ್ತು ದಿಗಂತ್ ಗೋವಾಗೆ ವೆಕೇಷನ್ ಗಾಗಿ ಹೋಗಿದ್ವಿ, ರೆಸಾರ್ಟ್ ನಲ್ಲಿ ಸಮ್ಮರ್ ಸಾಲ್ಟ್ ಮಾಡುವಾಗ ಲ್ಯಾಂಡಿಂಗ್ ಸರಿಯಾಗಿ ಆಗದೆ ದಿಗಂತ್ ಕುತ್ತಿಗೆಗೆ ಪೆಟ್ಟಾಗಿತ್ತು. ತಕ್ಷಣ ಗೋವಾದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದೆವು. ಅಲ್ಲಿಂದ ಏರ್ ಲಿಫ್ಟ್ ಮಾಡಿ ಬೆಂಗಳೂರಿಗೆ ಕರೆತಂದೆವು. ದಿಗಂತ್ ನನ್ನು ಏರ್ ಲಿಫ್ಟ್ ಮಾಡಲು ಗೋವಾ ಸರ್ಕಾರ ಸಾಕಷ್ಟು ನೆರವು ನೀಡಿತು ಅದಕ್ಕಾಗಿ ಗೋವಾ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಗೋವಾದಲ್ಲಿ ಇದ್ದಾಗ ತುಂಬಾ ಟೆನ್ಶನ್ ಆಗಿದ್ದೆ. ಈಗ ಟೆನ್ಶನ್ ಕಡಿಮೆಯಾಗಿದೆ. ನಾನು ಇನ್ಮೇಲೆ ದಿಗಂತ್ ನ ಕೇರ್ ಮಾಡ್ತೀನಿ. ಇವತ್ತು ಅಥವಾ ನಾಳೆ ಡಿಸ್ಚಾರ್ಜ್ ಮಾಡ್ತೀವಿ ಅಂದಿದ್ದಾರೆ ಎಂದು ಐಂದ್ರಿತಾ ರೇ ತಿಳಿಸಿದ್ಧಾರೆ.