ಬೆಂಗಳೂರು : ಬೆಂಗಳೂರಿನಲ್ಲಿ ಯುವತಿಯೊಬ್ಬಳು ಅಂಗಡಿ ಮಾಲಿಕನಿಂದ ಸಮಸ್ಯೆ ಎಂದು ಹೇಳಿ 2 ಲಕ್ಷ ಸಾಲ ಪಡೆದಿದ್ದರು. ಯುವತಿಗೆ ಮಾಲೀಕನ ಜೊತೆ ಲವ್ಲಿಡವ್ಲಿ ಆರಂಭವಾಗಿತ್ತು. 2 ಲಕ್ಷ ಸಾಲ ಪಡೆದ ಬಳಿಕ ಅಂಗಡಿ ಮಾಲಿಕನೊಂದಿಗೆ ಪ್ರೇಮದಾಟ ಸೆಕ್ಸ್ ವಿಚಾರ ಕುಟುಂಬಸ್ಥರಿಗೆ ಹೇಳುವುದಾಗಿ ಯುವತಿ ಬೆದರಿಕೆ ಹಾಕಿದ್ದಾರೆ. ಯುವತಿಯ ಒಪ್ಪಿಗೆ ಮೇರೆಗೆ ದೈಹಿಕ ಸಂಪರ್ಕ ಬೆಳೆಸಿದ್ದ ಬಟ್ಟೆ ಅಂಗಡಿ ಮಾಲಿಕ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಪ್ರಕರಣ ಏನು..? ಬಟ್ಟೆ ವ್ಯಾಪಾರಿ ವಿಕ್ರಂ ಎರಡು ವರ್ಷಗಳ ಹಿಂದೆ ಆರೋಪಿ ಯುವತಿಯನ್ನು ಬಟ್ಟೆ ಅಂಗಡಿ ಕೆಲಸಕ್ಕೆ ನೇಮಿಸಿಕೊಂಡಿದ್ದನು. ಕೆಲ ತಿಂಗಳ – ಬಳಿಕ ಯುವತಿ ತನ್ನ ಸಹೋದರ ಕಿರಣ್ ಗೆ ಅಪಘಾತವಾಗಿದೆ, ಚಿಕಿತ್ಸೆಗೆ ಹಣದ ಅಗತ್ಯವಿದೆ ಎಂದು 2 ಲಕ್ಷ ಹಣ ಪಡೆದಿದ್ದಳು. ಅಣ್ಣನಿಗೆ ಅಪಘಾತವಾಗಿದೆ ಎಂದು ಸಾಲ ಪಡೆದ ಬಟ್ಟೆ ಅಂಗಡಿಯ ಕೆಲಸದಾಕೆ. ನಂತರ ಹಣ ನೀಡದೆ ಸಮಜಾಯಿಷಿ ಹೇಳುತ್ತಿದ್ದರು.
ನಂತರ ವಿಕ್ರಂ ಜೊತೆ ಸಲುಗೆ ಬೆಳೆಸಿದ್ದ ಯುವತಿ. ಇಬ್ಬರ ಮಧ್ಯೆ ದೈಹಿಕ ಸಂಪರ್ಕ ಕೂಡ ಬೆಳೆದಿತ್ತು. ಯುವತಿ ನಿನ್ನ ಬಳಿ ನಮ್ಮ ಅಣ್ಣ ಮಾತನಾಡಬೇಕು ಬಾ ಎಂದು ಕರೆದಿದ್ದರು. ನಂತರ ಯುವತಿ ಎಂಟು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ವಿಕ್ರಂ ಭಯ ಬಿದ್ದು ಎಂಟು ಲಕ್ಷ ಹಣ ನೀಡಿದ್ದರು. ನಂತರ ಯುವತಿ ಪದೇ ಪದೇ ಇದೆ ರೀತಿಯಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಮೂವರು ಹಣ ನೀಡಿಲ್ಲ ಅಂದ್ರೆ ನಿಮ್ಮ ಎಲ್ಲಾ ವಿಚಾರ ನಿಮ್ಮ ಮನೆಗೆ ಹೇಳುತ್ತೀವಿ ಎಂದಿದ್ದರು. ಇದೇ ರೀತಿಯಾಗಿ ಪದೇ ಪದೇ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು. ಬ್ಲ್ಯಾಕ್ ಮೇಲ್ ತಾಳಲಾರದೆ ಇದೀಗ ವಿಕ್ರಂ ಮೂವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಂಗಡಿ ಮಾಲೀಕ ನೀಡಿರುವ ದೂರಿನಿಂದ ಮೂವರ ಮೇಲೆ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ : ಇನ್ನೆರಡು ದಿನದಲ್ಲಿ ಮಂಗಳೂರು ಬ್ಲಾಸ್ಟ್ ಆರೋಪಿ ವಿಚಾರಣೆ… ಶಾರಿಕ್ ಹೇಳಿಕೆ ದಾಖಲಿಸಲು ಸಜ್ಜಾಗಿರುವ ಪೊಲೀಸರು…