ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಈಗ ಡಾನ್ ಜಯರಾಜ್ ಅಬ್ಬರ ಜೋರಾಗ್ತಿದೆ. ಫಸ್ಟ್ ಡೇ ರೆಕಾರ್ಡ್ ಕಲೆಕ್ಷನ್ ಮಾಡಿದ ‘ಹೆಡ್ಬುಷ್’ ವೀಕೆಂಡ್ ಬಾಕ್ಸ್ ಆಫೀಸ್ನಲ್ಲೂ ಧೂಳೆಬ್ಬಿಸಿದೆ. ಈಗಾಗಲೇ ಕನ್ನಡದಲ್ಲಿ ಕಾಂತಾರ ಸಿನಿಮಾ ಆರ್ಭಟಿಸುತ್ತಿದೆ. ಇದರ ಬೆನ್ನಲೇ ಹೆಡ್ಬುಷ್ ಸಿನಿಮಾ ಘರ್ಜಸಿದೆ.
ಹೌದು, ಸ್ಯಾಂಡಲ್ವುಡ್ ದೀಪಾವಳಿ ಸಿನಿ ಸಂಭ್ರಮ ಜೋರಾಗಿದ್ದು, ಮತ್ತೊಂದು ರೆಕಾರ್ಡ್ ಕ್ರಿಯೇಟ್ ಮಾಡ್ತಿದೆ ಡಾನ್ ಡಾಲಿ ಟೀಮ್. ಈ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಕಿಂಗ್ ಆಗಿ ರಾರಾಜಿಸುತ್ತಿದೆ ಹೆಡ್ಬುಷ್ ಸಿನಿಮಾ. ಡಾಲಿ ಧನಂಜಯ್ ಸಾರಥ್ಯದಲ್ಲಿ ನಿರ್ಮಾಣ ಮಾಡಿರೋ ಎರಡನೇ ಸಿನಿಮಾ ಹೆಡ್ಬುಷ್. ಹೀಗಾಗಿ ಈ ಸಿನಿಮಾ ಮೇಲೆ ಡಾಲಿಗೆ ಸಿಕ್ಕಾಪಟ್ಟೆ ಒಲವು. ಇದಕ್ಕಾಗಿ ಸಾಕಷ್ಟು ಕಷ್ಟದಿಂದ ಇಷ್ಟಪಟ್ಟು ಮಾಡಿರೋ ಸಿನಿಮಾ. ಮೊದಲ ಸಿನಿಮಾವಾದ ಬಡವರಾಸ್ಕಲ್ನಲ್ಲಿ ಸೂಪರ್ ಹಿಟ್ ಕಂಡಂತಹ ಧನಂಜಯ್, ಎರಡನೇ ಸಿನಿಮಾ ಮೂಲಕ ಸೂಪರ್ ಸಕ್ಸಸ್ ಹಾದಿಯಲ್ಲಿ ಪ್ರಯಾಣಸುತ್ತಿದ್ದಾರೆ.
ಹೆಡ್ ಬುಷ್’ ಸಿನಿಮಾದಲ್ಲಿ ಬೆಂಗಳೂರು ಭೂಗತ ಜಗತ್ತನ್ನು ಆಳಿದ ಎಂ.ಪಿ. ಜಯರಾಜ್ ಪಾತ್ರದಲ್ಲಿ ಡಾಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರವನ್ನು ಅವರು ಜೀವಿಸಿದ್ದಾರೆ. ಈ ಸಿನಿಮಾ ಎಲ್ಲರಿಗೂ ಇಷ್ಟವಾಗಿದೆ. ಈ ಬಗ್ಗೆ ಬಿಟಿವಿ ಜೊತೆ ಎಕ್ಸ್ ಕ್ಲೂಸೀವ್ ಆಗಿ ಮಾತನಾಡಿದ ಡಾಲಿ ಧನಂಜಯ್, ಜನ ನುಗ್ಗಿ ಸಿನಿಮಾ ನೋಡ್ತಿದ್ದಾರೆ.. ತುಂಬಾ ಖುಷಿ ಆಗಿದೆ, ಇದು ಥ್ರಿಲ್ ಮೂಮೆಂಟ್. ಎಲ್ಲಾ ಗೆಲುವು ಅಭಿಮಾನಿಗಳಿಗೆ ಸೇರಬೇಕು, ಸಿನಿಮಾ ಗೆಲುತ್ತೆ ಅನ್ನೋ ಹೋಪ್ ಇತ್ತು. ತುಂಬಾ ಖರ್ಚು ಮಾಡಿದ್ದ ಸಿನಿಮಾ ಹೆಡ್ ಬುಷ್..
ಒಂದು ಕಡೆ ಸಣ್ಣ ಭಯ ಇತ್ತು, ಕಾಂತಾರ ಸಿನಿಮಾ ತುಂಬಾ ಚೆನ್ನಾಗಿ ಓಡ್ತಾ ಇದೆ.. ಇನ್ನೂ ಗಂಧದ ಗುಡಿ ತೆರೆ ಕಾಣುತ್ತೆ ಇದರ ಮಧ್ಯೆ ಹೇಗೆ ಸಿನಿಮಾ ರಿಲೀಸ್ ಮಾಡೋದು ಅಂತ ಭಯ ಇತ್ತು. ಆದ್ರೆ ಜನ ಕೈ ಹಿಡಿದಿದ್ದಾರೆ ಈಗ ನಿರಾಳವಾಗಿದೆ ಎಂದು ಹೇಳಿದ್ದಾರೆ.
ದೀಪಾವಳಿ ಹಬ್ಬ ಆರಂಭ ಆಗಿದೆ. ಈ ವಾರ ಸಾಲು ಸಾಲು ರಜೆಗಳಿವೆ. ಇದು ಚಿತ್ರಕ್ಕೆ ವರದಾನವಾಗಲಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಮತ್ತಷ್ಟು ಗಳಿಕೆ ಮಾಡುವ ಸಾಧ್ಯತೆ ಇದೆ. ಈ ಚಿತ್ರದಿಂದ ಧನಂಜಯ್ ಅವರು ಮತ್ತೊಂದು ಯಶಸ್ಸು ಕಂಡಿದ್ದಾರೆ. ಜಯರಾಜ್ ಆಗಿ ಅವರನ್ನು ಎಲ್ಲರೂ ಕಣ್ತುಂಬಿಕೊಳ್ಳುತ್ತಿದ್ದಾರೆ.