ರಾಜ್ಯದ ಜನತೆಗೆ ಕಿಲ್ಲರ್ ಕೊರೋನಾ ಮೇಲಿಂದ ಮೇಲೆ ಶಾಕ್ ನೀಡ್ತಿದೆ. ಜನರು ಇನ್ನೂ ಎಚ್ಚೆತ್ತುಕೊಳ್ಳದಿದ್ರೆ ಸರ್ಕಾರ ಕಾನೂನು ಅಸ್ತ್ರ ಪ್ರಯೋಗಿಸಲಿದೆ. ಮಾಸ್ಕ್ ಹಾಕದಿದ್ರೆ 1000 ರೂಪಾಯಿ ಫೈನ್ ಅಷ್ಟೇ ಅಲ್ಲ.
ಇನ್ಮುಂದೆ ರೂಲ್ಸ್ ಫಾಲೋ ಮಾಡಿದಿದ್ರೆ ನೀವು ಜೈಲಿಗೆ ಹೋಗೋದು ಪಕ್ಕಾ. ಕೊರೋನಾ ಟೆಸ್ಟ್ಗೆ ಒಪ್ಪದಿದ್ರೆ 3 ವರ್ಷ ಜೈಲು ಗ್ಯಾರೆಂಟಿ. ಸರ್ಕಾರ ಸೂಚಿಸಿದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ. ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕ, ಜ್ವರ ಲಕ್ಷಣ ಇದ್ರೆ ಹಾಗೂ ಉಸಿರಾಟ ಸಂಬಂಧಿ ಸಮಸ್ಯೆ ಇದ್ದರೂ ಕೊರೋನಾ ಟೆಸ್ಟ್ ಕಡ್ಡಾಯ.
ಈ ಬಗ್ಗೆ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ ಜಾರಿಗೆ ಡಿಸಿಗಳ ಹೆಗಲಿಗೆ ಹೊಣೆ ನೀಡಲಾಗಿದೆ. ಒಂದ್ವೇಳೆ ಕೊರೋನಾ ಪರೀಕ್ಷೆ ಮಾಡಿಸದಿದ್ದರೆ 50 ಸಾವಿರದವರೆಗೆ ಭಾರೀ ದಂಡದ ಬಿಸಿ ತಟ್ಟಲಿದೆ.