ಹೈದರಬಾದ್: ಕನ್ನಡದ ಅದೆಷ್ಟೋ ಪ್ರತಿಭೆಗಳು ಇಂದು ಪರಭಾಷೆಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚ್ತಿದ್ದಾರೆ. ಇದೇ ಲಿಸ್ಟ್ಗೆ ಮತ್ತೊಂದು ಗ್ಲಾಮರ್ ಗೊಂಬೆ ಸೇರಿಕೊಂಡಿದೆ. ಆಕೆ ಇಂದು ಟಾಲಿವುಡ್ನ ಸೆನ್ಸೇಷನಲ್ ಕ್ವೀನ್ ಪಟ್ಟ ಅಲಂಕರಿಸಿದ್ದಾಳೆ. ಈಕೆ ಬೇರ್ಯಾರು ಅಲ್ಲ ನಿಧಿ ಅಗರ್ವಾಲ್.. ಡೇಟಿಂಗ್-ಚಾಟಿಂಗ್ನಿಂದ ಇಷ್ಟು ದಿನ ಸುದ್ದಿಯಾಗ್ತಿದ್ದ ನಿಧಿ, ಈಗ ಫೋಟೋಶೂಟ್ ಮೂಲಕ ಸೌಂಡ್ ಮಾಡ್ತಿದ್ದಾರೆ.
ಇದನ್ನೂ ಓದಿ: ತನ್ನವರೆಲ್ಲಾ ಹೆಣವಾಗಿದ್ರೂ ಒಂದು ಹನಿ ಕಣ್ಣೀರು ಹಾಕಿಲ್ಲ ಶಂಕರ್..! ಐದು ದಿನ ಮನೆ ಬಿಟ್ಟು ಹೊರಗೆ ಹೋಗಿದ್ದು ನಿಜಾನಾ..?
ಸೌತ್ ಅಂಗಳದಲ್ಲಿ ಬೆಂಗಳೂರು ಹುಡುಗಿಯದೇ ಸೌಂಡ್..!
ಸೌತ್ ಸೆನ್ಸೇಷನಲ್ ಕ್ವೀನ್, ಟಾಲಿವುಡ್ ಅಬ್ಬಾಯಿಗಳ ಗ್ಲಾಮರ್ ಗೊಂಬೆ, ತಮಿಳಿಗರ ಚೆಂದುಳ್ಳಿ ಚೆಲುವೆ. ಬಾಲಿವುಡ್ ಗಾರ್ಜಿಯಸ್ ಬೆಡಗಿ.. ಕನ್ನಡಿಗರ ನೆಚ್ಚಿನ ಹುಡುಗಿ ಓನ್ ಎಂಡ್ ಓನ್ಲಿ ನಿಧಿ ಅಗರ್ವಾಲ್. ತೆಳ್ಳಗೆ ಬೆಳ್ಳಗೆ ಬಳಕುವ ಬಳಿಯಂತಿರುವ ನಿಧಿ, ಗ್ಲಾಮರ್ ಹಾಗೂ ಡಿ-ಗ್ಲಾಮರ್ ಲುಕ್ನಲ್ಲಿ ನಟಿಸಿ, ಸೌತ್ನಲ್ಲಿ ತನ್ನದೇ ವಿಭಿನ್ನ ಛಾಪು ಮೂಡಿಸಿದ್ದಾರೆ.
ನಿಧಿ ಅಗರವಾಲ್ ಹುಟ್ಟಿದ್ದು ಹೈದ್ರಾಬಾದ್ನಲ್ಲಿ, ಆದ್ರೆ ಓದಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿಯೇ. ಬಣ್ಣದ ಜಗತ್ತಿನ ಕನಸು ಕಾಣ್ತಿದ್ದ ಈ ಬ್ಯೂಟಿ, ಮಾಡೆಲಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟು, ರ್ಯಾಂಪ್ ಮೇಲೆ ಹೆಜ್ಜೆ ಹಾಕಿರೋ ಗ್ಲಾಮರ್ ಗೊಂಬೆ. 2014ರ ಮಿಸ್ ದಿವಾ ಫೈನಲ್ ಕಂಟೆಸ್ಟೆಂಟ್ ಆಗಿ ಮಿಂಚಿದ್ರು. ನಂತ್ರ 2017ರಲ್ಲಿ ಬಾಲಿವುಡ್ಗೆ ಲಗ್ಗೆ ಇಟ್ಟು, ಟೈಗರ್ ಶ್ರಾಫ್ ಜೊತೆ ‘ಮುನ್ನಾ ಮೈಕೆಲ್’ ಸಿನಿಮಾ ಮೂಲಕ ಹಿರಿತೆರೆಯ ಮೇಲೆ ರಾರಾಜಿಸಿದ್ರು. ಬಿಟೌನ್ನಿಂದ ಬಣ್ಣ ಹಚ್ಚಿದ ನಿಧಿಗೆ ಮೊದಲ ಸಿನಿಮಾವೇ ಸೂಪರ್ ಸಕ್ಸಸ್ ತಂದುಕೊಟ್ಟಿತ್ತು.
ಬಾಲಿವುಡ್ನಲ್ಲಿ ನಿಧಿ ಸಕ್ಸಸ್ನ ಮೊದಲ ಮೆಟ್ಟಿಲು ಏರುವ ವೇಳೆಯಲ್ಲಿಯೇ, ಈಕೆಯನ್ನ ಅರಸಿಕೊಂಡು ಪರಭಾಷೆಗಳಿಂದಲೂ ಸಾಕಷ್ಟು ಆಫರ್ಗಳು ಬಂತು. ಆದ್ರೆ ನಿಧಿ ಡೈರೆಕ್ಟ್ ಹೈದ್ರಾಬಾದ್ ಫ್ಲೈಟ್ ಹತ್ತಿ ಟಿಟೌನ್ಗೆ ಕಾಲಿಟ್ಟು, ಅಲ್ಲಿ ‘ಸವ್ಯಸಾಚಿ’ ಸಿನಿಮಾದಲ್ಲಿ ಮಿರ ಮಿರ ಅಂತ ಮಿಂಚಿದ್ರು. ಇಲ್ಲಿಂದ ನೋಡಿ ಶುರುವಾಯ್ತು ನಿಧಿ ಲಕ್. ವರ್ಷಕ್ಕೆ ಒಂದೇ ಒಂದು ಸಿನಿಮಾ ಮಾಡಿದ್ರೂ, ಆ ಸಿನಿಮಾ ಸೂಪರ್ ಹಿಟ್ ಆಗಿ, ಸೌತ್ ಸೆನ್ಸೇಷನಲ್ ಕ್ವೀನ್ ಆಗ್ಬಿಟ್ಟಿದ್ದಾಳೆ.
ನಿಧಿ ಅಗರವಾಲ್ ಕೇವಲ ಸಕ್ಸಸ್ ಹೀರೋಯಿನ್ ಮಾತ್ರವಲ್ಲ ಸೂಪರ್ ಡ್ಯಾನ್ಸರ್ ಕೂಡ. ಹೌದು ಈಕೆ ಬ್ಯಾಲೆ, ಕಥಕ್ ಮತ್ತು ಬೆಲ್ಲಿ ನೃತ್ಯದಲ್ಲಿ ಪರಿಣಿತಿ ಹೊಂದಿದ್ದು, ನಿಧಿ ಸೊಂಟ ಬಳಕಿಸಿದ್ರೆ ಸಾಕು ಪಡ್ಡೆಗಳು ಫುಲ್ ಫಿದಾ ಆಗಿ, ವಾರೇ ವಾ ನಿಧಿ ಅಂತ ಜೈಕಾರ ಹಾಕ್ತಾರೆ. ಅಷ್ಟರ ಮಟ್ಟಿಗೆ ನಿಧಿ ಫೇಮಸ್ ನೃತ್ಯಗಾರ್ತಿ.
ಬೆಂಗಳೂರು ಬೆಣ್ಣೆಯ ಕಲರ್ಫುಲ್ ಫೋಟೋಶೂಟ್ ಹೇಗಿದೆ..?
ಬಾಲಿವುಡ್, ಟಾಲಿವುಡ್, ಕಾಲಿವುಡ್ನಲ್ಲಿ ಹವಾ ಕ್ರಿಯೇಟ್ ಮಾಡ್ತಿರೋ ನಿಧಿ ಅಗರ್ವಾಲ್, ಕಲರ್ಫುಲ್ ಕಾಸ್ಟ್ಯೂಮ್, ಡಿಫರೆಂಟ್ ಹೇರ್ಸ್ಟೈಲ್, ಪಡ್ಡೆಗಳ ಕಿಕ್ ಏರಿಸೋ ನೋಟದಲ್ಲಿ ಕ್ಯಾಮೆರಾಕ್ಕೆ ಪೋಸ್ ಕೊಟ್ಟಿದ್ದಾರೆ. ಸಖತ್ ಹಾಟ್ ಎಂಡ್ ಬೋಲ್ಡ್ ಲುಕ್ನಲ್ಲಿರೋ ನಿಧಿ ಫೋಟೋಶೂಟ್, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ನೋಡುಗರನ್ನ ಮೋಡಿ ಮಾಡ್ತಿದೆ.
ಸಿನಿಮಾ ಹೊರತಾಗಿ ಫೋಟೋಶೂಟ್ ಅಂತ ಸೌಂಡ್ ಮಾಡ್ತಿರೋ ನಿಧಿ ಅಗರ್ವಾಲ್, ಪರ್ಸನಲ್ ಲೈಫ್ ಬಗ್ಗೆಯೂ ಸದಾ ಒಂದಲ್ಲ ಒಂದು ವಿಷಯದಲ್ಲಿ ಚರ್ಚೆ ಆಗ್ತಾನೇ ಇರುತ್ತದೆ. ಆದ್ರೆ ಇದಕ್ಕೆಲ್ಲಾ ಡೋಂಟ್ ಕೇರ್ ಅಂತ ಬಿಂದಾಸ್ ಆಗಿ ಸಿನಿಮಾದಲ್ಲಿ ಬ್ಯುಸಿಯಾಗಿರುತ್ತಾಳೆ ನಿಧಿ. ಎನೀ ವೇ ನಮ್ ಕನ್ನಡತಿ ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ಸಿನಿಮಾಗಳಲ್ಲಿ ಬ್ಯೂಸಿಯಾಗಿರೋದನ್ನ ನೋಡಿ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಆದ್ರೆ ಒಮ್ಮೆ ನಮ್ ಕನ್ನಡ ಸಿನಿಮಾದಲ್ಲೂ ನಟಿಸಿ ಅಂತಾ ಕನವರಿಸುತ್ತಿದ್ದಾರೆ. ಫ್ಯಾನ್ಸ್ ಕನಸು ನನಸು ಮಾಡಿ ಕನ್ನಡದಲ್ಲಿ ನಟಿಸ್ತಾರಾ ಅಂತ ಕಾದುನೋಡಬೇಕಾಗಿದೆ.
🤍🤍✨✨🚀🧚🏻 #NidhhiAgerwal pic.twitter.com/0JRnXOdgbl
— Nidhhi Agerwal (@AgerwalNidhhi) September 16, 2021