ಕನ್ನಡದ ‘ಕಿಸ್’ ಚಿತ್ರದಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ ಶ್ರೀ ಲೀಲಾ ಭರಾಟೆ ಚಿತ್ರದ ನಂತರ ಸಖತ್ ಹವಾ ಕ್ರಿಯೇಟ್ ಮಾಡಿದ್ರು. ಒಳ್ಳೆ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದು ಮೋಡಿ ಮಾಡಿದ ಶ್ರೀ ಲೀಲಾ ಟಾಲಿವುಡ್ ನ ಪೆಳ್ಳಿ ಸಂದಡಿ ಚಿತ್ರದ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟರು. ನಟಿಸಿದ ಸಿನಿಮಾಗಳಲ್ಲಿ ತನ್ನ ಪ್ರತಿಭೆಯನ್ನು ತೋರಿಸಿರುವ ಶ್ರೀ ಲೀಲಾ ಡಿಮ್ಯಾಂಡ್ ಈಗ ಹೆಚ್ಚಾಗಿದೆ . ಸಾಕಷ್ಟು ಭರವಸೆ ಮೂಡಿಸಿರುವ ಕಿಸ್ ಹುಡುಗಿಯ ಕೈ ಯಲ್ಲಿ ಸಾಕಷ್ಟು ಸಿನಿಮಾಗಳಿವೆ . ಭರಾಟೆಯ ನಂತರ ಆಕೆಯ ಲಕ್ ಕೂಡ ಚೇಂಜ್ ಆಗಿದೆ .
ತೆಲುಗು ಸಿನಿಮಾದಲ್ಲಿ ಮುದ್ದು ಮುದ್ದಾಗಿ ನಟಿಸಿರುವ ಶ್ರೀ ಲೀಲಾ ನಿರ್ಮಾಪಕರ ಪಾಲಿಗೆ ಲಕ್ಕಿ ಗರ್ಲ್ .. ಹಾಗಾಗಿಯೇ ಟಾಲಿವುಡ್ ನಲ್ಲಿಯೂ ಶ್ರೀಲೀಲಾ ಕಾರು ಬಾರು ಜೋರಾಗಿದೆ. ಈಗಾಗಲೇ ಕನ್ನಡದ ನಟಿಯರು ಟಾಲಿವುಡ್ ನಲ್ಲಿ ಮಿಂಚಿ ತೆಲುಗು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದಾರೆ. ಮೊನ್ನೆ ಮೊನ್ನೆ ಕೊಡಗಿನ ಕುವರಿ ರಶ್ಮಿಕಾ ಸಂಭಾವನೆ ಹೆಚ್ಚಿಸಿಕೊಂಡಿದ್ದು, ಸಖತ್ ಸುದ್ದಿ ಆಗಿತ್ತು. ಈಗ ಆ ಸಾಲಿಗೆ ಶ್ರೀ ಲೀಲಾ ಕೂಡ ಸೇರ್ತಾ ಇದ್ದು, ಸಂಭಾವನೆ ಹೆಚ್ಚಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.
ಟಾಲಿವುಡ್ ನಲ್ಲಿ ಈಗ ಕನ್ನಡ ನಟಿಯರದ್ದೇ ದರ್ಬಾರ್. ಸದ್ಯ ಪೆಳ್ಳಿ ಸಂದಡಿ ಚಿತ್ರದ ನಂತರ ಶ್ರೀ ಲೀಲಾ ಕನ್ನಡದಲ್ಲಿ ಬೈ ಟು ಲವ್ ಕಹಾನಿ ಹೇಳಲಿದ್ದಾರೆ. ಈಗಾಗಲೇ ಸಾಕಷ್ಟು ಪ್ರಾಜೆಕ್ಟ್ ಗಳಿಗೆ ಸಹಿ ಹಾಕಿರುವ ಶ್ರೀ ಲೀಲಾ ಟಾಲಿವುಡ್ ನಲ್ಲೇ ಸೆಟಲ್ ಆಗುವ ಬಗ್ಗೆ ಊಹಾಪೋಹಗಳು ಕೇಳಿ ಬರ್ತಾ ಇದೆ. ಟಾಲಿವುಡ್ ಸೂಪರ್ ಸ್ಟಾರ್ ರವಿತೇಜ ಜೊತೆ ಕಿಸ್ ಬೆಡಗಿ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬರ್ತಾ ಇದೆ. ಹಾಗಾಗಿ ಶ್ರೀ ಲೀಲಾ ಫುಲ್ ಬ್ಯುಸಿಯಾಗಿಬಿಟ್ಟಿದ್ದಾರೆ.
ಸದ್ಯ ಶ್ರೀಲೀಲಾ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸೋ ಬಗ್ಗೆ ಚರ್ಚೆ ನಡೀತಿದೆ. ವೈಷ್ಣವ್ ತೇಜ್, ನವೀನ್ ಪೊಲಿಶೆಟ್ಟಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸೋ ಬಗ್ಗೆ ಶೀಘ್ರದಲ್ಲಿ ಅಧಿಕೃತ ಮಾಹಿತಿ ಸಿಗಲಿದೆ. ಸಿತಾರಾ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಈ ಎರಡು ಸಿನಿಮಾಗಳು ಮೂಡಿ ಬರಲಿದೆ. ಇಷ್ಟು ದಿನ 50 ರಿಂದ 60 ಲಕ್ಷ ಸಂಭಾವನೆ ಪಡೀತಿದ್ದ ಶ್ರೀಲೀಲಾ ಈ ಚಿತ್ರವೊಂದಕ್ಕೆ ಒಂದು ಕೋಟಿ ಕೇಳ್ತಿದ್ದಾರೆ ಅನ್ನೋ ಗುಸುಗುಸು ಟಾಲಿವುಡ್ ನಲ್ಲಿ ಹರಿದಾಡ್ತಿದೆ. ಒಟ್ನಲ್ಲಿ ಕನ್ನಡದ ನಟಿ ಪರಭಾಷೆಯಲ್ಲಿ ಹವಾ ಕ್ರಿಯೇಟ್ ಮಾಡ್ತಿರೋದು ಅಭಿಮಾನಿಗಳಿಗೆ ಖುಷಿ ತಂದಿದೆ.