ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಕೆಲ ದಿನಗಳಿಂದ ಮಯೋಸಿಟಿಸ್ ನಿಂದ ಬಳಲುತ್ತಿರುವುದು ಗೊತ್ತೇ ಇದೆ. ಆದರೆ ಇದೀಗ ಸಮಂತಾ ಸ್ಥಿತಿ ಸ್ವಲ್ಪ ಚಿಂತಾಜನಕವಾಗಿದೆ. ಹೀಗಾಗಿ ಉತ್ತಮ ಚಿಕಿತ್ಸೆಗಾಗಿ ಸಮಂತಾ ಅವರನ್ನು ದಕ್ಷಿಣ ಕೊರಿಯಾಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ತೆಲುಗು ಸಿನಿಮಾ ರಂಗದ ಖ್ಯಾತ ನಟಿ ಸಮಂತಾ ಆರೋಗ್ಯದ ಬಗ್ಗೆ ಆಗಾಗ್ಗೆ ಹೊಸ ಹೊಸ ಸುದ್ದಿಗಳು ಬರುತ್ತಲೇ ಇವೆ. ಸಮಂತಾ ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮೊದಲು ಸುದ್ದಿ ಆಯಿತು. ಅದನ್ನು ಅವರ ಮ್ಯಾನೇಜರ್ ಅಲ್ಲಗಳೆದರು. ನಂತರ ಸ್ವತಃ ಸಮಂತಾ ಅವರೇ ತಮಗಿರುವ ಮಯೋಸಿಟಿಸ್ ಕಾಯಿಲೆ ಕುರಿತಂತೆ ಬರೆದುಕೊಂಡರು. ಫೋಟೋ ಸಮೇತ ಹಾಕಿ, ಚಿಕಿತ್ಸೆ ಪಡೆಯುತ್ತಿರುವ ಕುರಿತು ಹೇಳಿಕೊಂಡಿದ್ದರು. ಸಮಂತಾ ಅವರು ಮೊದಲು ಅಮೆರಿಕಾದಲ್ಲಿ ಚಿಕಿತ್ಸೆ ಪಡೆದರು ಎಂದು ಹೇಳಲಾಗಿತ್ತು. ಅಲ್ಲಿಂದ ಬಂದ ನಂತರ ಅವರು ಭಾರತದಲ್ಲೇ ಅದಕ್ಕೆ ಔಷಧಿ ಪಡೆದರು. ಇದೀಗ ದಕ್ಷಿಣ ಕೊರಿಯಾಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಯಾವುದೇ ಕ್ಷಣದಲ್ಲಿ ನಡ್ಡಾ ಭೇಟಿ ಆಗ್ತಾರಾ ಸಿಎಂ ಬೊಮ್ಮಾಯಿ… ವೋಟರ್ ಐಡಿ ಪ್ರಕರಣದ ಸಂಪೂರ್ಣ ರಿಪೋರ್ಟ್ ಕೊಡ್ತಾರಾ ಸಿಎಂ..?