ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಆಗಾಗ ಕೆಲವೊಂದು ಸವಾಲು ಹಾಕ್ತಿರ್ತಾರೆ. ಬಾಟೆಲ್ ಕ್ಯಾಪ್ ಓಪನ್ ಚಾಲೆಂಜ್, ಫಿಟ್ ನೆಸ್ ಚಾಲೆಂಜ್, ಮನೆ ಸ್ವಚ್ಛ ಮಾಡುವ ಚಾಲೆಂಜ್, ಹೀಗೆ ಹಲವು ಸವಾಲುಗಳನ್ನ ಹಾಕಿ ಸಹ ಕಲಾವಿದರಿಗೆ ಸವಾಲ್ ಸ್ವೀಕರಿಸುವಂತೆ ಚಾಲೆಂಜ್ ಮಾಡುವುದು ಸದ್ಯ ಟ್ರೆಂಡಿಂಗ್ನಲ್ಲಿದೆ.
ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬರಲಿ ! ಸಚಿವರೆಲ್ಲರೂ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದ ಡಿ ಕೆ ಶಿವಕುಮಾರ್ !
ಅರೆ, ನಟಿ ಸಮಂತಾ ಹಾಕಿದ ಸವಾಲ್ ಆದ್ರು ಏನು..? ನಮ್ ಕಿರಿಕ್ ಬ್ಯೂಟಿ ಚಾಲೆಂಜ್ ಸ್ವೀಕರಿಸಿ ಮಾಡಿದ್ದಾದ್ರು ಏನು…? ಹೇಳ್ತೀವಿ ಈ ಸ್ಟೋರಿ ಓದಿ…
ಇದೀಗ ಗ್ರೀನ್ ಇಂಡಿಯಾ ಚಾಲೆಂಜ್ ಟ್ರೆಂಡಿಂಗ್ ನಲ್ಲಿದ್ದು, ನಟಿ ಸಮಂತಾ ಸವಾಲು ಸ್ವೀಕರಿಸಿ ಮೂವರು ಸೆಲೆಬ್ರಿಟಿಗಳಿಗೆ ದಾಟಿಸಿದ್ದಾರೆ. ಗ್ರೀನ್ ಇಂಡಿಯಾ ಚಾಲೆಂಜ್ ಅಂದ್ರೆ ಗಿಡನೆಡುವ ಸವಾಲು..ಇತ್ತೀಚೆಗೆ ಸಮಂತಾ ಮಾವ ನಾಗಾರ್ಜುನ್ ಜೊತೆ ಸೇರಿಕೊಂಡು ಮನೆಯ ಅಂಗಳದಲ್ಲಿ ಗಿಡ ನೆಟ್ಟು ಆ ಚಾಲೆಂಜ್‌ಅನ್ನು ರಶ್ಮಿಕಾಗೆ ದಾಟಿಸಿದ್ದರು.
ಸಮಂತಾ ಗಿಡನೆಡುತ್ತಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಮಾವ ಸೊಸೆ ಇಬ್ಬರು ಗಿಡ ನೆಡುತ್ತಿರುವ ಫೋಟೋಗಳು ಫುಲ್ ವೈರಲ್ ಆಗಿ ಅಭಿಮಾನಿಗಳು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
ಸಮಂತಾ ಕೊಟ್ಟ ಚಾಲೆಂಜ್ ಸ್ವೀಕರಿಸಿ ರಶ್ಮಿಕಾ, ಕೊಡಗಿನಲ್ಲಿರುವ ತಮ್ಮ ಮನೆಯಲ್ಲಿ 3 ಸಸಿ ನೆಟ್ಟಿ, ಗಿಡನೆಡುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಮಂತಾ ಹಾಕಿರುವ ಸವಾಲನ್ನು ಸ್ವೀಕಾರ ಮಾಡಿದ್ದೇನೆ. ‘ಈ ಚಾಲೆಂಜ್ ನೀಡಿದ್ದಕ್ಕಾಗಿ ಸಮಂತಾಗೆ ಧನ್ಯವಾದಗಳು. ರಾಶಿ ಖನ್ನಾ, ಕಲ್ಯಾಣಿ ಪ್ರಿಯದರ್ಶನ್ ಮತ್ತು ಆಶಿಕಾ ರಂಗನಾಥ್ ಅವರಿಗೆ ನಾನು ಈ ಚಾಲೆಂಜ್ ದಾಟಿಸುತ್ತಿದ್ದೇನೆ, ನನ್ನ ಅಭಿಮಾನಿಗಳು ಕೂಡ ಇದೇ ರೀತಿ 3 ಗಿಡಗಳನ್ನು ನೆಟ್ಟು ಈ ಚಾಲೆಂಜ್ ಮುಂದುವರಿಸಿ’ ಎಂದು ಬರೆದುಕೊಂಡಿದ್ದಾರೆ ರಶ್ಮಿಕಾ.
https://www.instagram.com/p/CCq1fu0pOXX/