ಬಾಲಿವುಡ್ನ ಎಂ ಎಸ್ ಧೋನಿ ಖ್ಯಾತಿಯ ಸುಶಾಂತ್ ಸಿಂಗ್ ಸಾವನ್ನಪ್ಪಿ ಇಂದಿಗೆ ಒಂದು ತಿಂಗಳಾಗಿದ್ದು, ಪ್ರೇಮಿಯ ನೆನೆದು ಸುಶಾಂತ್ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ ಭಾವೋದ್ವೇಗದ ಪತ್ರ ಬರೆಯುವುದರ ಮೂಲಕ ಕಂಬನಿ ಮಿಡಿದಿದ್ದಾರೆ.
ಕಿರುತೆರೆ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟು ಸಕ್ಸಸ್ ಫುಲ್ ಸಿನಿಮಾಗಳನ್ನು ಮಾಡಿ ಬಿಟೌನ್ನಲ್ಲಿ ಶೈನ್ ಆಗುತ್ತಿರುವ ವೇಳೆಯಲ್ಲೇ, ಸುಶಾಂತ್ ಜೂನ್ 14ರ ಭಾನುವಾರ ಚಿರನಿದ್ರೆಗೆ ಜಾರಿದ್ದರು. ಸುಮಾರು 11 ಸಿನಿಮಾಗಳಲ್ಲಿ ನಟಿಸಿರುವ ಸುಶಾಂತ್ ಸಾವು ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲದೇ ದೇಶವ್ಯಾಪಿ ಸದ್ದು ಮಾಡಿತು.
ಸುಶಾಂತ್ ಸಾವು ಆಕಸ್ಮಿಕವಲ್ಲ. ಕಾಣದ ಕೈಗಳ ಕೈವಾಡವಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗುರಿಯಾಯಿತು. ಇನ್ನು ಸುಶಾಂತ್ ಸಿಂಗ್ ಸಾವು ಪ್ರೀ ಪ್ಲ್ಯಾನ್ ಮರ್ಡರ್ ಎಂದು ಹೇಳುವುದರ ಮೂಲಕ ಬಾಲಿವುಡ್‍ನಲ್ಲಿನ ನೆಪಟೋಯಿಸಂ ಮತ್ತು ನಿರ್ದೇಶಕ ಕರಣ್ ಜೋಹರ್ ವಿರುದ್ಧ ಕಂಗನಾ ರಾಣಾವತ್ ಕಿಡಿಕಾರಿದ್ದರು.
ಜನಪ್ರತಿನಿಧಿಗಳು ಮಾದರಿ ಆಗೋದಂದ್ರೆ ಹೀಗೆ…! ಕೋರೋನಾ ಸೋಂಕಿತರ ಜೊತೆ ಸಂಸದ ಡಿ ಕೆ ಸುರೇಶ್ ಹೇಗೆ ನಡ್ಕೊಂಡ್ರು ಗೊತ್ತಾ ?
ಸುಶಾಂತ್ ನಿಧನಹೊಂದಿ ಒಂದು ತಿಂಗಳಾದರು ಆತನ ಸಾವಿನ ಬಗ್ಗೆ ಯಾವುದೇ ಪೋಸ್ಟ್ಗಳನ್ನು ಅಪ್ಲೋಡ್ ಮಾಡದ ರಿಯಾ ಕೊನೆಗೂ ಮೌನ ಮುರಿದಿದ್ದಾರೆ. ಸುಶಾಂತ್ ಜೊತೆಗಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ.
‘ನೀನು ಇಲ್ಲ ಎಂದು ತಿಳಿದ ಕ್ಷಣದಿಂದ ಇದುವರೆಗೂ ನನ್ನ ಭಾವನೆಗಳನ್ನು ಕಂಟ್ರೋಲ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಭಾವನೆಗಳನ್ನು ಎದುರಿಸಲು ಇನ್ನೂ ನಾನು ಹರಸಾಹಸ ಮಾಡುತ್ತಿದ್ದೇನೆ. ಮನಸ್ಸಿನಲ್ಲಿ ಆಗಿರುವ ಗಾಯ ಇನ್ನೂ ವಾಸಿಯಾಗಿಲ್ಲ. ನನಗೆ ಪ್ರೀತಿಯ ಮೇಲೆ ನಂಬಿಕೆ ಬರುವಂತೆ ಮಾಡಿ, ಜೀವನ ಪಾಠಗಳನ್ನು ಹೇಳಿಕೊಟ್ಟ ವ್ಯಕ್ತಿ ನೀನು. ಪ್ರತಿ ದಿನ ನಾನು ನಿನ್ನಿಂದ ಸಾಕಷ್ಟು ವಿಷಯಗಳ ಬಗ್ಗೆ ಕಲಿತಿದ್ದೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ’ ಎಂದು ರಿಯಾ ಹೇಳಿದ್ದಾರೆ.
ನನಗೆ ತಿಳಿದಿದೆ ಈಗ ನೀನು ತುಂಬಾ ಶಾಂತಿಯಿರುವ ಜಾಗದಲ್ಲಿ ನೆಲಸಿದ್ದೀಯಾ. ಚಂದ್ರ, ನಕ್ಷತ್ರಗಳು, ಗ್ಯಾಲಾಕ್ಸಿ ಶ್ರೇಷ್ಠ ಭೌತಶಾಸ್ತ್ರಜ್ಞನನ್ನು ತೆರೆದ ಬಾವುಗಳಿಂದ ಸ್ವಾಗತಿಸಿವೆ ಎಂದುಕೊಳ್ಳುತ್ತೇನೆ. ಜಗತ್ತು ಕಂಡ ಅತಿ ದೊಡ್ಡ ಅದ್ಭುತ ನೀನು. ಪರಾನುಭೂತಿ ಮತ್ತು ಸಂತೋಷದಿಂದ ತುಂಬಿರುವ ನೀವು ಶೂಟಿಂಗ್ ಸ್ಟಾರ್. ನನ್ನ ಶೂಟಿಂಗ್ ತಾರೆ ಮತ್ತೆ ನನ್ನ ಬಳಿಗೆ ಮರಳಿ ಬರಲಿ ಎಂದು ಬಯಸುತ್ತೇನೆ’ ರಿಯಾ ಹೇಳಿದ್ದಾರೆ.
ನಮ್ಮಿಬ್ಬರ ಮಧ್ಯೆ ಇದ್ದ ಪ್ರೀತಿ ನಿಜವಾಗಿತ್ತು. ನಮ್ಮಿಬ್ಬರ ಆಚೆಯೂ ಈ ಪ್ರೀತಿಯಿದೆ ಎಂದು ನೀವು ಹೇಳಿದ್ದಿರಿ. ಎಲ್ಲರನ್ನು ನೀನು ಮುಕ್ತ ಮನಸ್ಸಿನಿಂದ ಪ್ರೀತಿಸುತ್ತಿದ್ದೆ. ನಮ್ಮ ಪ್ರೀತಿ ಏನೆಂದು ತೋರಿಸಿದ್ದೀರಿ. ನಿನ್ನನ್ನು ಕಳೆದುಕೊಂಡು ಇಂದಿಗೆ 30 ದಿನವಾಯಿತು, ಆದರೆ ಜೀವನದ ಕೊನೆವರೆಗೂ ನಾನೂ ನಿನ್ನನ್ನು ಪ್ರೀತಿಸುತ್ತೇನೆ’ ಎಂದು ರಿಯಾ ಚಕ್ರವರ್ತಿ ಬರೆದುಕೊಂಡಿದ್ದಾರೆ.
https://www.instagram.com/p/CCnBR95HAmO/?igshid=1q2sh8u5djumm