ಪೂನಂ ಪಾಂಡೆ ಈ ಹೆಸರು ಕೇಳಿದ ತಕ್ಷಣವೇ ಪಡ್ಡೆ ಹೈಕಳು ನಿದ್ದೆಯಿಂದ ಎದ್ದು ಕುಳಿತುಕೊಳ್ಳುತ್ತಾರೆ. ತನ್ನ ಮೋಹಕ ನಟನೆ, ಬಳುಕವ ಬಳ್ಳಿಯಂತಹ ಮೈಮಾಟ, ಬೋಲ್ಡ್ ಲುಕ್ನಿಂದಲೇ ಸಾಕಷ್ಟು ಅಭಿಮಾನಿಗಳನ್ನೊಂದಿರುವ ಚೆಲುವ ಪೂನಂ ತನ್ನ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ.
ಇದನ್ನೂ ಓದಿ : ರಶ್ಮಿಕಾ ಮಂದಣ್ಣರ ಈ ಫೋಟೋ ನೋಡಿದ್ರೆ ಫಿದಾ ಆಗ್ತೀರಾ…..! ಟೆನ್ಷನ್ನಲ್ಲಿದ್ರೆ ಈ ಸುದ್ದಿ ಓದಿ…!
ಪೂನಂ ಎರಡು ವರ್ಷಗಳ ಕಾಲ ಸ್ಯಾಮ್ ಅಹ್ಮದ್ ಬಾಂಬೆಯೊಡನೆ ಲಿವಿಂಗ್ ರಿಲೇಷನ್ ಶಿಪ್ನಲ್ಲಿದ್ದರು. ಪ್ರೇಮ ಪಕ್ಷಿಗಳಾಗಿದ್ದ ಈ ಹಾಟ್ ಜೋಡಿ ಇದೇ ವರ್ಷ ಸೆಪ್ಟಂರ್ 1 ರಂದು ಮುಂಬೈನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟರು. ಈ ವಿಚಾರವನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡುವ ಮೂಲಕ ತಿಳಿಸಿದ್ದರು.
https://www.instagram.com/p/CE9aM0hpgv_/
ಇದನ್ನೂ ಓದಿ : ಶೈನ್ ಶೆಟ್ಟಿ ಮದುವೆಗೆ ಹುಡುಗಿ ಫಿಕ್ಸ್ ಆಯ್ತಾ ? ಯಾರದು ಹುಡುಗಿ ? ಏನದು ವಿಡಿಯೋ?
ಹನಿಮೂನ್ ಹ್ಯಾಂಗೋವರ್ ನಿಂದ ಹರ ಬಂದು ಸದ್ಯ ಗೋವಾದ ಕೆನಕೋನಾದಲ್ಲಿ ಪೂನಂ ಪಾಂಡೆ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಸ್ಯಾಮ್ ಬಾಂಬೆ, ಪಾಂಡೆ ಮೇಲೆ ಹಲ್ಲೆ ಮಾಡಿ, ದೈಹಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾನೆ ಎಂದು ಕೆನಕೋನಾ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಇಂದು ಪೂನಂ ಪತಿ ಸ್ಯಾಮ್ ಬಾಂಬೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮುದುವೆಯಾದ ಕೆಲವೇ ದಿನಕ್ಕೆ ಗಂಡನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಜೈಲಿಗೆ ಅಟ್ಟಿರುವ ಮಾಡಿರುವ ಪೂನಂ ನಡವಳಿಕೆಯನ್ನು ಕಂಡು ಇವರ ಸಂಸಾರದಲ್ಲಿ ಬಿರುಕು ಮೂಡಿದ್ಯಾ..? ಎಂದು ಅನುಮಾನಕಕ್ಕೆ ಎಡೆಮಾಡಿಕೊಟ್ಟಿದೆ.
https://www.instagram.com/p/CFRYmJrJ0Uk/