ನಿತ್ಯಾ ಮೆನನ್ ಬೋಲ್ಟ್ & ಕ್ಯೂಟ್ ನಟಿ. ಸೆವೆನ್ ಒ ಕ್ಲಾಕ್’ ಚಿತ್ರದ ಮೂಲಕ ಸ್ಯಾಂಡಲ್ಗೆ ಎಂಟ್ರಿ ಕೊಟ್ಟ ನಿತ್ಯಾ ನಂತರ ಜೋಷ್, ಮೈನಾ, ಕೋಟಿಗೊಬ್ಬ 3 ಸೇರಿ ತಮಿಳು, ಹಿಂದಿ, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಕೂಡಾ ಸಾಕಷ್ಟು ಹೆಸರು ಮಾಡಿದ್ದಾರೆ. ಇದೀಗ ನಿತ್ಯಾ ಮೆನನ್ನ ಲಿಪ್ ಲಾಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಲೆಸ್ಬಿಯನ್ ಪಾತ್ರ ನಿರ್ವಹಿಸುವುದು ನಿತ್ಯಾ ಮೆನೆನ್ಗೆ ಹೊಸದೇನಲ್ಲ. ಈಗಾಗಲೇ ತೆಲುಗು ಚಿತ್ರ ‘ವಿಸ್ಮಯ’ ದಲ್ಲಿ ನಿತ್ಯಾ ಇನ್ನೊಬ್ಬ ಮಹಿಳೆಯತ್ತ ಆಕರ್ಷಿತವಾಗುವ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಬ್ರೀತ್: ಇನ್ ಟು ದಿ ಶಾಡೋ ವೆಬ್ ಸರಣಿಯಲ್ಲಿ ನಿತ್ಯಾ ಮನೆನ್ ಇನ್ನೊಬ್ಬ ಹುಡುಗಿಯ ಜೊತೆ ಲಿಪ್ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
ಮುತ್ತಿನ ನಗರಿಯಲ್ಲಿ ಕಿಚ್ಚ ಸುದೀಪ್ ಹವಾ ಶುರು ! ಫ್ಯಾಂಟಮ್ನಲ್ಲೂ ಕನ್ನಡ ಪ್ರೇಮ ಮೆರೆದ ಅಭಿನಯ ಚಕ್ರವರ್ತಿ !
ಬ್ರೀತ್: ಇನ್ ಟು ದಿ ಶಾಡೋ ವೆಬ್ ಸರಣಿಯಲ್ಲಿ ಶ್ರುತಿ ಬಾಪ್ನ ಹಾಗೂ ನಿತ್ಯಾ ಮೆನನ್ ಕಿಸ್ ಮಾಡಿದ್ದು, ಸದ್ಯ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
ಇನ್ನು ನಟಿ ನಿತ್ಯಾ ತಮ್ಮ ಅತ್ಯುತ್ತಮ ನಟನೆಗೆ ಹೆಸರುವಾಸಿ. ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಿರ್ವಹಿಸುವ ನಿತ್ಯಾ ಅವರ ವೃತ್ತಿಜೀವನವನ್ನ ಗಮನಿಸಿದರೆ, ಅವರು ಅನೇಕ ಪ್ರಾಯೋಗಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತಮ್ಮ ನಟನಾ ಕೌಶಲ್ಯದಿಂದ ಪ್ರೇಕ್ಷಕರ ಮನಸ್ಸು ಕದ್ದಿದ್ದಾರೆ.