ದೆಹಲಿ : ಶ್ರದ್ಧಾ ಮಾದರಿಯಲ್ಲೇ ಆ ನಟಿಗೂ ಕಿರಿಕ್..?, ಬಾಯ್ ಫ್ರೆಂಡ್ ಕಿರುಕುಳ ಕೊಟ್ಟಿದ್ನಾ..?, ಅಲರ್ಟ್ ಆಗದೇ ಇದ್ರೆ ಶ್ರದ್ಧಾ ಸ್ಥಿತಿ ಬರ್ತಿತ್ತಾ..?, ನಟಿ ಹಳೆ ಪ್ರೇಮಿಯ ವಿಕೃತಿ ರಿವೀಲ್ ಮಾಡಿದ್ದಾರೆ.
ನಟಿಗೂ ಆರೋಪಿ ದಿನವೂ ಬಡಿಯುತ್ತಿದ್ದನಂತೆ. ನಟಿ ಹಿಂದಿ, ತಮಿಳು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಫ್ಲೋರಾ ಸೈನಿ ಹಳೆ ಪ್ರೇಮಿಯ ಕಿರಿಕ್ ನ್ನು ಬಾಯ್ಬಿಟ್ಟಿದ್ದಾರೆ. ನಾನು ದೈಹಿಕವಾಗಿ ಕಿರುಕುಳ ಅನುಭವಿಸಿದ್ದೆ ಎಂದು ಸೈನಿ ಹೇಳಿದ್ದಾರೆ. ಫ್ಲೋರಾ ಸೈನಿ ಹಾರರ್ ಸಿನಿಮಾ ಸ್ತ್ರೀ ಖ್ಯಾತಿಯ ನಟಿಯಾಗಿದ್ದಾರೆ. ಈ ಹಿಂದೆ ಸೈನಿ ನಿರ್ಮಾಪಕರೊಬ್ಬರ ಜೊತೆ ಹೊಂದಿದ್ದರು. ಶ್ರದ್ಧಾ ಕೇಸ್ ಬಗ್ಗೆ ಮಾತನಾಡುತ್ತಾ ಸೈನಿ ತನ್ನ ಹಳೆ ಕತೆ ಬಿಚ್ಚಿಟ್ಟರು. ಸೈನಿ ನನ್ನ ದವಡೆ ಮುರಿಯುವಂತೆ ಹೊಡೆದಿದ್ದನೆಂದು ಆರೋಪ ಮಾಡಿದ್ದಾರೆ.ನಟಿಯನ್ನು ಇಂದು ರಾತ್ರಿಯೇ ಕೊಲೆ ಮಾಡ್ತೀನಿ ಎಂದು ಪ್ರಿಯಕರನಿಂದ ಬೆದರಿಕೆ ಬಂದಿತ್ತಂತೆ, ಆಗಲೇ ಸೈನಿ ಪೊಲೀಸರಿಗೆ ದೂರು ನೀಡಿದ್ದಾರಂತೆ. ಸೈನಿ ಡೇಟಿಂಗ್ ಮಾಡುವ ಯುವತಿಯರಿಗೆ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ : ಗೋವಿಂದರಾಜ ನಗರದಲ್ಲಿ ರಾಜಕೀಯ ಕ್ರಾಂತಿ….ನಾಳೆ ಪ್ರಭಾವಿ ಕಾಂಗ್ರೆಸ್ ನಾಯಕ ಬಿಜೆಪಿಗೆ ಸೇರ್ಪಡೆ…