ಬೆಂಗಳೂರು : ಕಿರುತೆರೆ ನಟಿ ಚೇತನಾ ಸಾವು ಪ್ರಕರಣದಲ್ಲಿ ನಟಿಗೆ ಫ್ಯಾಟ್ ಸರ್ಜರಿ ಮಾಡಿದ್ದ ಶೆಟ್ಟೀಸ್ಗೆ ಶಾಕ್ ನೀಡಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿ ಆಸ್ಪತ್ರೆಗೆ ಬೀಗ ಜಡಿದಿದ್ದಾರೆ.
ಫ್ಯಾಟ್ ಸರ್ಜರಿ ವೇಳೆ ನಟಿ ಚೇತನಾ ಸಾವನಪ್ಪಿದ್ದಾರೆ. ಹೀಗಾಗಿ ಬೆಂಗಳೂರು ಜಿಲ್ಲೆ DHOರಿಂದ ಶೆಟ್ಟೀಸ್ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಆರೋಗ್ಯ ಇಲಾಖೆ ನೋಟಿಸ್ ನೀಡಿ ಶೆಟ್ಟೀಸ್ ಆಸ್ಪತ್ರೆ ಲಾಕ್ ಮಾಡಲಾಗಿದೆ. ನೋಟಿಸ್ ನೀಡಿದ 24 ಗಂಟೆ ಒಳಗೆ ಉತ್ತರಿಸುವಂತೆ ನೋಟಿಸ್ ನೀಡಲಾಗಿದ್ದು, ಇಲ್ಲದಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿರೋ ಕಾಸ್ಮೆಟಿಕ್ ಸರ್ಜರಿ ಕೇಂದ್ರಗಳು ನಕಲಿನಾ , ಇನ್ನೆಷ್ಟು ಜನರ ಪ್ರಾಣ ತಿಂದಿವೆ ನಕಲಿ ಕಾಸ್ಮೆಟಿಕ್ ಕೇಂದ್ರಗಳು ಎಂಬುದು ಬಯಲಾಗುತ್ತದೆ.
ಇದನ್ನೂ ಓದಿ : ಇಂದು ಬೆಂಗಳೂರಿನಲ್ಲಿ ಸಿಎಂ ರೌಂಡ್ …! ಎಲ್ಲೆಲ್ಲಿ ಬರ್ತಾರೆ ಗೊತ್ತಾ..?