ನಟಿ ಅದಿತಿ ಪ್ರಭುದೇವ್ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ನಡೆಯುತ್ತಿದೆ.
ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ ಆರತಕ್ಷತೆಯಲ್ಲಿ ಗುಲಾಬಿ ಬಣ್ಣದ ಲೆಹಂಗಾ ಧರಿಸಿ ವಧು ಅದಿತಿ ಹಾಗೂ ನೀಲಿ ಬಣ್ಣದ ಶೆರ್ವಾನಿ ಸೂಟ್ ಧರಿಸಿ ವರ ಯಶಸ್ವಿ ಮಿಂಚುತ್ತಿದ್ದಾರೆ. ಯಶ್, ರಾಧಿಕಾ ಪಂಡಿತ್, ಲಹರಿ ವೇಲು , ಕಟ್ಟಾ ಸುಬ್ರಹ್ಮಣ್ಯ ನಾಯ್ಡು , ಹಿರಿಯ ನಟಿ ತ್ರಿವೇಣಿ , ನಿರ್ಮಾಪಕ ಉದಯ್ ಕೆ ಮೆಹ್ತಾ, ನಟ ನವೀನ್ ಕೃಷ್ಣ, ಸಚಿವ ಸೋಮಣ್ಣ ಸೇರಿ ಸಿನಿಮಾ ಹಾಗೂ ರಾಜಕೀಯ ಗಣ್ಯರು ಭಾಗಿಯಾಗಿದ್ದಾರೆ.
ಇದನ್ನೂ ಓದಿ : ರಾಜ್ಯ ರಾಜಕಾರಣದ ಬಗ್ಗೆ ನಡ್ಡಾ ಜೊತೆ ಚರ್ಚೆ ಮಾಡಲಿರುವ ಸಿಎಂ..! ದೆಹಲಿ ಭೇಟಿ ವೇಳೆ ಸಂಪುಟ ವಿಚಾರ ಚರ್ಚೆ ಆಗುತ್ತಾ..?