ಶ್ರೀ ನಿಧಿ ಶೆಟ್ಟಿ ಮಿಸ್ ಸೂಪರ್ ನ್ಯಾಚುರಲ್ ಪಟ್ಟ ಮುಡಿಗೇರಿಸಿಕೊಂಡ ಬ್ಯೂಟಿ. ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಜೊತೆ ಮೊದಲ ಬಾರಿಗೆ ಹೆಜ್ಜೆ ಹಾಕಿದ ಸ್ವೀಟಿ. ಈ ಮಂಗಳೂರಿನ ಬೆಡಗಿ ಯಾರಿಗೆ ಗೊತ್ತಿಲ್ಲ ಹೇಳಿ, ರಾಕಿಯ ರೀನಾ ಆಗಿ ಕೆಜಿಎಫ್ ಸಿನಿಮಾದ ಮೂಲಕ ಹಲ್ಝಲ್ ಎಬ್ಬಿಸಿದ ಬ್ಯೂಟಿ. ಯಶ್ ಜೊತೆ ಕೆಜಿಎಫ್ ಚಾಪ್ಟರ್ -2 ನಲ್ಲೂ ನಟಿಸಬೇಕು ಅಂತ ಏನೆಲ್ಲಾ ಮಾಡಿದ್ದಾರೆ ಗೊತ್ತಾ..?
ಕೆಜಿಎಫ್ ಬೆಡಗಿ ಅಂದ್ರೆ ಸಾಕು ನಮ್ಮಗೆ ನೆನಪಾಗೋದೇ ತೆಳ್ಳಗೆ ಬೆಳ್ಳಗೆ, ಮತ್ಸ್ಯ ಕನ್ನಿಕೆಯಂತಿರೋ ಓನ್ ಎಂಡ್ ಓನ್ಲಿ ಶ್ರೀನಿಧಿ ಶೆಟ್ಟಿ. ಮಾಡೆಲಿಂಗ್ ಲೋಕದಲ್ಲಿ ಈ ಮಿಂಚುಳ್ಳಿ ಮಿಸ್ ಸೂಪರ್ ನ್ಯಾಷನಲ್ ಪಟ್ಟಕೇರಿ, ದೇಶದ ಕೀರ್ತಿ ಪತಾಕೆಯನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಬ್ಯೂಟಿ. ಅದಾದ ಬಳಿಕ ರಾಕಿಯ ಕೆಜಿಎಫ್ ಕೋಟೆ ರೀನಾ ಆಗಿ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದ, ಶ್ರೀನಿಧಿ ಶೆಟ್ಟಿ ಕೆಜಿಎಫ್ -2 ನಲ್ಲೂ ಮುಂದುವರೆಯಲ್ಲಿದ್ದಾರೆ. ಅದಕ್ಕಾಗಿ ಶ್ರೀ ನಿಧಿ ಏನೇನೆಲ್ಲಾ ಮಾಡಿದ್ದಾರೆ ಅಂತ ಕೇಳಿದ್ರೆ ನೀವೆಲ್ಲಾ ಶಾಕ್ ಆಗ್ತೀರ.
ಇದನ್ನೂ ಓದಿ : ಗಾಂಧಿನಗರದಲ್ಲಿ ಶುರುವಾಯ್ತು ಡಾಲಿ ಧನಂಜಯ್ ಹವಾ.! ಭೂಗತ ಲೋಕದಲ್ಲಿ ‘ಹೆಡ್ ಬುಷ್’ ಆಟ ಆಡಲಿದ್ದಾರೆ ಡಾಲಿ .!
.
ಶ್ರೀನಿಧಿ ಶೆಟ್ಟಿ ಕೆಜಿಎಫ್-1 ಸೂಪರ್ ಹಿಟ್ ಆದ್ಮೇಲೆ ಆಕೆಯನ್ನ ಹುಡುಕಿಕೊಂಡು ಸಾಕಷ್ಟು ಆಫರ್ಗಳು ಬಂದ್ವು. ಆದ್ರೆ ಶ್ರೀನಿಧಿ ಕೆಜಿಎಫ್ ಚಾಪ್ಟರ್-2ಗೆ ಒಂದಲ್ಲಾ ಎರಡಲ್ಲಾ 7 ಏಳು ಸಿನಿಮಾಗಳನ್ನ ರಿಜೆಕ್ಟ್ ಮಾಡಿದ್ದಾರೆ. ಕನ್ನಡದಲ್ಲಿ ಮೂರು ಸಿನಿಮಾ, ತೆಲುಗಿನಲ್ಲಿ ಎರಡು ಸಿನಿಮಾ ಹಾಗೂ ತಮಿಳಿನಲ್ಲಿ ಎರಡು ಚಿತ್ರಗಳಿಗೆ, ನೋವೆ ಗುರು ನಾನು ನಿಮ್ಮ ಯಾವ ಸಿನಿಮಾದಲ್ಲಿ ಆ್ಯಕ್ಟಿಂಗ್ ಮಾಡೊಲ್ಲ. ಐಮ್ ಬ್ಯುಸಿ ಇನ್ ಕೆಜಿಎಫ್ ಚಾಪ್ಟರ್-2 ಅಂದಿದ್ದಾರೆ.
ಇದನ್ನೂ ಓದಿ : ಗಣೇಶ ಹಬ್ಬಕ್ಕೆ ಬರಲಿದ್ಯಾ ಹೊಸಾ ಕರೆನ್ಸಿ..? ಹೊಸ ನೋಟು ಬಂದರೆ ಹಳೇ ನೋಟುಗಳ ಕಥೆ ಏನು..?
ಯಶ್ ಜೊತೆನೇ ಸಿನಿಮಾ ಮಾಡ್ಬೇಕು ಅಂತ ನಿಧಿ ಶೆಟ್ಟಿ ಹೇಳಿ ಕೈ ಬಿಟ್ಟಿದನ್ನ ಕೇಳಿ ಕೆಲವು ಫ್ಯಾನ್ಸ್ ಬೇಜಾರ್ ಆದ್ರೆ, ಇನ್ನು ಕೆಲವು ಫ್ಯಾನ್ಸ್ಗಳು ನಿಧಿನ ಕೆಜಿಎಫ್ ಕ್ವೀನ್ ಅಂತಾನೇ ಕೊಂಡಾಡುತ್ತಿದ್ದಾರೆ. ಈ ವರ್ಷಾಂತ್ಯದಲ್ಲಿ ರಿಲೀಸ್ ಆಗಬೇಕಿದ್ದ ಕೆಜಿಎಫ್ ಚಾಪ್ಟರ್ 2 ಕೊರೋನಾ ಲಾಕ್‌ಡೌನ್‌ನಿಂದ ಪ್ಲಾನ್ ಚೇಂಜ್ ಮಾಡಿಕೊಂಡಿದ್ದು, ಮುಂದಿನ ವರ್ಷ ಕೆಜಿಎಫ್ ತೆರೆ ಮೇಲೆ ಧಗಧಗಿಸಲಿದೆ.
ಇದನ್ನೂ ಓದಿ : ಈಗ ಐಷಾರಾಮಿ ಬಾಡಿಗೆ ಕಾರುಗಳನ್ನು ಇಟ್ಟು ಕೊಂಡವರಿಗೆ ಎದುರಾಗಿದೆ ತೀವ್ರ ಸಂಕಷ್ಟ