ಗೌರಿ-ಗಣೇಶ ಹಬ್ಬ ಅಂದ್ರೆ ಹಿಂದೂಗಳಿಗೆ ಸ್ಪೇಷಲ್. ಅದ್ರಲ್ಲೂ ನವ ಜೋಡಿಗಳಿಗೆ ತುಂಬಾನೇ ವಿಶೇಷವಾದ ಹಬ್ಬ. ನಮ್ಮ ಕನ್ನಡ ಚಿತ್ರರಂಗದ ನವ ದಂಪತಿಗಳಾದ ಜಾಗ್ವಾರ ಹೀರೋ ನಿಖಿಲ್ ಕುಮಾರಸ್ವಾಮಿ ಹಾಗು ರೇವತಿ ದಂಪತಿಗಳು ಮದುವೆಯಾದ ನಂತ್ರ ಮೊದಲ ಹಬ್ಬವನ್ನ ಸಖತ್ ಸ್ಪೇಷಲ್ ಆಗಿ ಸೆಲಬ್ರೇಟ್ ಮಾಡಿದ್ದಾರೆ.
ಹಿಂದೂ ಸಂಪ್ರಾಯದಲ್ಲಿ ಪ್ರತಿಯೊಂದು ಹಬ್ಬವೂ ಪೌರಾಣಿಕ ಹಿನ್ನೆಲೆ ಹಾಗೂ ಧಾರ್ಮಿಕ ಸಂಪ್ರದಾಯ ಹೊಂದಿವೆ. ಅಂತಹ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬ ಅತ್ಯಂತ ಪ್ರಮುಖವಾದುದು. ಭಾದ್ರಪದ ಮಾಸದಲ್ಲಿ ಬರುವ ಮೊದಲ ಹಬ್ಬವೇ ಗೌರಿಹಬ್ಬ.
ಈ ಗೌರಿ ಹಬ್ಬ ಎಲ್ಲರ ಪಾಲಿಗೆ ವಿಶೇಷ. ಅದ್ರಲ್ಲೂ ನವ ವಧು-ವರರಿಗೆ ತುಂಬಾನೇ ವಿಶೇಷವಾದ ಹಬ್ಬ. ತವರು ಮನೆಗೆ ಬಂದ ಹೆಣ್ಣು ಮಕ್ಕಳು ಉಡುಗೊರೆಯನ್ನು ಪಡೆದುಕೊಳ್ಳುವುದು. ಹೆತ್ತವರು ಒಡ ಹುಟ್ಟಿದವರು ಚೆನ್ನಾಗಿರಲಿ ಎಂದು ಹಾರೈಸುವುದು ಗೌರಿ ಹಬ್ಬದ ಮಹತ್ವವಾಗಿದೆ.
ಇದನ್ನೂ ಓದಿ : ನಿಖಿಲ್-ರೇವತಿ ಮೂರು ಗಂಟಿಗೆ ಮೂರು ತಿಂಗಳು..! ಮನ ಮೆಚ್ಚಿದ ಮಡದಿ ಬಗ್ಗೆ ನಿಖಿಲ್ ಹೇಳಿದ್ದೇನು..?
ಗೌರಿ ಹಬ್ಬವನ್ನ ಕೆಲವರ ಮನೆಯಲ್ಲಿ ಅದ್ಧೂರಿಯಾಗಿ ಸೆಲಬ್ರೇಟ್ ಮಾಡಿದ್ರೆ. ಇನ್ ಕೆಲವರು ಮನೆಯುಲ್ಲಿ ಸಿಂಪಲ್ಲಾಗಿ ಪೂಜೆ, ಪ್ರಸಾದ ಇದ್ದೇ ಇರುತ್ತದೆ. ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಮೊದಲ ಹಬ್ಬವನ್ನ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರೀತಿಯ ಮಡದಿ ರೇವತಿ, ಸಖತ್ ವಿಶೇಷವಾಗಿ ಆಚರಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ, ಸ್ಯಾಂಡಲ್ವುಡ್ನ ಯಂಗ್ ಅಂಡ್ ಟ್ಯಾಲೆಂಟೆಂಡ್ ಆ್ಯಕ್ಟರ್. ಶಾರ್ಟ್ ಟೈಮ್ನಲ್ಲಿ ಸೂಪರ್ ಹಿಟ್ ಪಡೆದ ಹೀರೋ ನಿಖಿಲ್. ಜಾಗ್ವರ್ ಸಿನಿಮಾದ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ರೈಸಿಂಗ್ ಸ್ಟಾರ್ ಆ ಬಳಿಕ ಮುಟ್ಟಿದ್ದೆಲ್ಲವೂ ಚಿನ್ನವೇ. ಜಾಗ್ವರ್ ಬಳಿಕ ಸೀತಾರಾಮ ಕಲ್ಯಾಣ, ಕುರುಕ್ಷೇತ್ರಗಳಂತಹ ಸಿನಿಮಾಗಳನ್ನ ಅಭಿನಯಿಸಿದ ನಿಖಿಲ್ ಸ್ಯಾಂಡಲ್ವುಡ್ನ ಯುವರಾಜನಾಗಿ ಮಿಂಚುತಿದ್ದಾರೆ.
ಇದನ್ನೂ ಓದಿ : ಎಂಟಿಬಿ ನಾಗರಾಜ್ ಮನೆಗೆ ಬಂದ ರಾಯಲ್ ಬ್ಲೂ ಸುಂದರಿ ! ಈ ಸರ್ವಾಂಗ ಚೆಲುವೆಯ ಫೋಟೋ ನೋಡಿ !
ನವವಧುವರರಿಗೆ ಮದುವೆಯಾದ ಆರಂಭದಲ್ಲಿ ಬರುವ ಪ್ರತಿ ಹಬ್ಬಗಳೂ ವಿಶೇಷ. ನಿಖಿಲ್ ಹಾಗೂ ರೇವತಿಗೂ ಸಹ ವಿವಾಹವಾದ ನಂತರ ಇದು ಮೊದಲ ಗೌರಿ-ಗಣೇಶ ಹಬ್ಬ. ಹೀಗಾಗಿ ಗೌರಿ ಹಬ್ಬವನ್ನ ಈ ಬಾರಿ ಸಖತ್ ವಿಶೇಷವಾಗಿ ನಿಖಿಲ್-ರೇವತಿ ಮನೆಯಲ್ಲೇ ಸಂಭ್ರಮದಿಂದ ಆಚರಿಸಿದ್ದಾರೆ. ಈ ನವ ಜೋಡಿಗಳು ಹೊಸ ಬಟ್ಟೆ ತೊಟ್ಟು, ದೇವರಿಗೆ ಪೂಜೆ ನೇರವೇರಿಸಿ, ಇಡೀ ಕುಟುಂಬದ ಜೊತೆ ಊಟ ಮಾಡುವ ಮೂಲಕ ಮೊದಲ ಹಬ್ಬವನ್ನ ಸಖತ್ ವಿಜ್ರಂಭಣೆಯಿಂದ ಆಚರಿಸಿದ್ದಾರೆ.
ಗೌರಿ ಹಬ್ಬದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಿಖಿಲ್ ಅವರು “ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆ ಗೌರಿ ಹಾಗೂ ಗಣೇಶನ ಕೃಪಾಕಟಾಕ್ಷದಿಂದ ಎಲ್ಲರಿಗೂ ಶುಭವಾಗಲಿ.ನಾಡಿಗೆ ಬಂದಿರುವ ವಿಘ್ನಗಳು ದೂರವಾಗಲಿ ಎಂದು ಪ್ರಾರ್ಥಿಸುತ್ತೇನೆ.
https://www.instagram.com/p/CEJbRmupVIM/
ಮಣ್ಣಿನ ಮೂರ್ತಿಗಳನ್ನು ಪೂಜಿಸುವ ಮೂಲಕ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿ ಆಚರಿಸೋಣ.
ಎಂದು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.