ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಮೋಸ್ಟ್ ಅವೈಟೆಡ್ ಫ್ಯಾಂಟಮ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕಷ್ಟ ಅಂತ ಬಂದೋರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡ್ತಿದ್ದಾರೆ. ನಿನ್ನೆ ಚಂದನ ವನದಲ್ಲಿ ರಾಖಿ ಹಬ್ಬದ ಸಂಭ್ರಮ ಮನೆಮಾಡಿತ್ತು.
ಇದೀಗ ಕಿಚ್ಚ ಸುದೀಪನಿಗೆ ಒಂದು ದಿನ ತಡವಾಗಿ ರಕ್ಷಾ ಬಂಧನದ ಶುಭಾಶಯಗಳನ್ನು ಅವರ ಅಕ್ಕ ತಿಳಿಸಿದ್ದಾರೆ. ತಮ್ಮ ಸಹೋದರಿಯರ ಜತೆಗೆ ಕಪ್ಪು ಬಿಳುಪಿನ ಹಳೆಯ ಫೋಟೊ ಮತ್ತು ಇತ್ತೀಚಿನ ಫೋಟೊಗಳನ್ನು ಜೋಡಿಸಿ ಕಿಚ್ಚನ ಅಕ್ಕ ಸುಜಾತ ಸಂಜೀವನ್ ಶುಭ ಕೋರಿದ್ದಾರೆ.
ಸ್ವಲ್ಪ ತಡವಾಗಿದೆ. ಆದ್ರೂ ರಕ್ಷ ಬಂಧನದ ಶುಭಾಶಯಗಳು ಎಂದು ಕಿಚ್ಚನ ಎರಡು ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆಗಿನ ಸಹೋದರ, ಈಗಿನ ಸಹೋದರ, ಎಂದೆಂದಿಗೂ ಸಹೋದರ ಎಂಬ ಪದಗಳ ಮೂಲಕ ಕುಟುಂಬ ಬಾಂಧವ್ಯವನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ನಿಮ್ಮ ಮೇಲಿದ್ದ ಗೌರವ ಕಡಿಮೆಯಾಯ್ತು ಅಂತ ಅಮಿತಾಬ್ ಬಚ್ಚನ್ಗೆ ‘ಆ’ ಮಹಿಳೆ ಹೇಳಿದ್ಯಾಕೆ.? ಯಾರು ಆ ಮಹಿಳೆ ? ಬಿಗ್ ಬಿ ಹಾಗ್ಯಾಕಂದ್ರು ?
ಇನ್ನು ಈ ಫೋಟೋದಲ್ಲಿ ಸುದೀಪ್ ಸಹೋದರಿ ಸುಜಾತಾ ಅವರು ಅಕ್ಕ-ತಮ್ಮನ ಪ್ರೀತಿಯನ್ನು ತಿಳಿಸಿದ್ದಾರೆ. ನೀನು ಎಂದೆಂದಿಗೂ ನಮ್ಮ ಪುಟಾಣಿ ತಮ್ಮ. ನಿನ್ನನ್ನು ಮುದ್ದು ಮಾಡಲು ನಾವು ಯಾವಾಗಲೂ ಸಿದ್ಧ. ನಮಗಿಂತ ಚಿಕ್ಕವನು ನೀನು ಅನ್ನೋದನ್ನ ನೆನಪು ಮಾಡಲು ಬಯಸುತ್ತೇವೆ ಎಂದು ತಮಾಷೆಯಾಗಿ ಹೇಳಿದ್ದಾರೆ.
ಇದನ್ನೂ ಓದಿ : ಟಾಲಿವುಡ್ನಲ್ಲಿ ಶುರುವಾಯ್ತು ಫ್ಯಾನ್ಸ್ ವಾರ್.! ಆ ಸ್ಟಾರ್ ಹೀರೋಗಳ ಫ್ಯಾನ್ಸ್ ಮಧ್ಯೆ ತಂದಿಕ್ಕಿದ್ದು ‘ಆ’ ವ್ಯಕ್ತಿ..!
ಸದ್ಯ ಸಹೋದರಿಯರ ಜತೆ ಇರುವ ಕಿಚ್ಚ ಸುದೀಪ್ನ ಬಾಲ್ಯ ಮತ್ತು ವಯಸ್ಕ ಸಮಯದ ಫೋಟೊಗಳು ಸಖತ್ ವೈರಲ್ ಆಗುತ್ತಿದೆ…..
You will always remain as our baby brother 🤗 We are always ready to pamper you and remind you that you are younger to us 😜 You have always been there for us D, love you lots and stay blessed Kanda @KicchaSudeep https://t.co/2IRpvHHod0
— Sujatha Sanjeev (@SujathaSanjeev) August 4, 2020