ರಾಜನ ಗೆಟಪ್ನಲ್ಲಿ ಇರುವ ಸ್ಯಾಂಡಲ್ವುಡ್ನ ಆ ಹೀರೋ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಾವು ಅವಾಗ್ಲೇ ಹಂಗೆ ಇವಾಗ್ ಕೇಳ್ಬೇಕಾ ಅನ್ನುವಂತ ಸ್ಟೋರಿ ಹೇಳ್ತಿದ್ದೆ . ಅರೆ ಯಾರಪ್ಪ ಆ ಸ್ಟಾರ್ ಅಂತೀರ. ಅವರೆ ಸ್ಯಾಂಡಲ್ವುಡ್ನ ನಟ ರಾಕ್ಷಸ ಡಾಲಿ ಧನಂಜಯ್.
ಕನ್ನಡ ಸಿನಿ ಪ್ರಿಯರ ಪಾಲಿನ ಪ್ರೀತಿಯ ‘ಡಾಲಿ’ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರ ಹಳೆ ಫೋಟೋವನ್ನ ಹಂಚಿಕೊಂಡಿದ್ದಾರೆ. ‘ಏಳನೇ ತರಗತಿಯಲ್ಲಿ, ರಾಜಕುಮಾರನ ಪಾತ್ರದಲ್ಲಿ..’ ಅಂತ ಕ್ಯಾಪ್ಷನ್ ಕೂಡ ನೀಡಿದ್ದಾರೆ. ಅಲ್ಲಿಗೆ, ಧನಂಜಯಗೆ ಚಿಕ್ಕ ವಯಸ್ಸಿನಿಂದಲೇ ನಟನೆ ಬಗ್ಗೆ ಅಪಾರ ಆಸಕ್ತಿ ಇತ್ತು ಅನ್ನೋದು ಈ ಫೋಟೋದಿಂದ ರಿವೀಲ್ ಆಗಿದೆ.
https://www.instagram.com/p/CDAs_mBl7g6/
ಇನ್ನು ಡಾಲಿಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಭಿಮಾನಿಗಳಂತೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಬಗೆಬಗೆ ಕಮೆಂಟ್ ಮೂಲಕ ನಟರಾಕ್ಷಸನ ಫೋಟೋಕ್ಕೆ ಲೈಕ್ ನೀಡುತ್ತಿದ್ದಾರೆ. ‘ಆವಾಗಲೇ ಹಂಗೆ ಇನ್ನು ಇವಾಗ್ ಕೇಳ್ಬೇಕಾ..’ ಎನ್ನುತ್ತಿದ್ದಾರೆ.
ಸದ್ಯ ಧನಂಜಯ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಜಗ್ಗೇಶ್ ನಾಯಕತ್ವದ ‘ತೋತಾಪುರಿ’ ಚಿತ್ರದಲ್ಲಿ ಡಿಫರೆಂಟ್ ಪಾತ್ರ ಮಾಡಿದ್ದಾರೆ. ಹಾಗೇ ‘ಯುವರತ್ನ’, ‘ಪೊಗರು’, ‘ಸಲಗ’ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಮ್ಮದೇ ಸ್ವಂತಃ ಬ್ಯಾನರ್‌ನಲ್ಲಿ ‘ಬಡವ ರಾಸ್ಕಲ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ತೆಲುಗಿನ ‘ಪುಷ್ಪ’ ಚಿತ್ರದಿಂದಲೂ ಅವರಿಗೆ ಆಫರ್ ಬಂದಿದೆಯಂತೆ. ಅಲ್ಲು ಅರ್ಜುನ್ ನಟನೆಯ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ನಿರ್ದೇಶಕ ಸುಕುಮಾರ್ ಈಗಾಗಲೇ ಧನಂಜಯ ಜೊತೆ ಒಂದು ಸುತ್ತಿನ ಮಾತುಕತೆ ಮಾಡಿದ್ದಾರಂತೆ.