ಸ್ಯಾಂಡಲ್ವುಡ್ನ ಡಾಲಿ ಖ್ಯಾತಿಯ ಧನಂಜಯ್ ವಿಭಿನ್ನ ಪಾತ್ರಗಳಿಂದ ಫೇಮಸ್ ಆದ ನಟ.. ಈ ರಾಟೆ ಹುಡುಗನ ಕೈಯಲ್ಲಿ ಅದ್ಭುತ ಪಾತ್ರಗಳನ್ನ ನಿಭಾಯಿಸೊ ಶಕ್ತಿ ಇದೆ, ಹೀಗಾಗಿ ಡಾಲಿನ ಹುಡುಕಿಕೊಂಡು ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರುತ್ತಿವೆ. ಈ ಟಗರು ವಿಲನ್ ಬರ್ತಡೇಗೆ ದಿನ ಗಣನೆ ಶುರುವಾಗಿದ್ದು, ತಮ್ಮ ಹುಟ್ಟು ಹಬ್ಬದಂದು ಮತ್ತೊಂದು ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡ್ತಿದ್ದಾರೆ..
ಡಾಲಿಯ ಮೋಸ್ಟ್ ಅವೈಟೆಡ್ ಸಿನಿಮಾ ‘ದಾದಾಗಿರಿಯ ದಿನಗಳು’ ಆಧಾರಿತ, ಜಯರಾಜ್ ಕಥೆಯ ಟೈಟಲ್ ನಾಳೆ ಅನೌನ್ಸ್ ಆಗಲಿದೆ. ವಿಶೇಷ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇದನ್ನ ಬಿಡುಗಡೆ ಮಾಡಲಿದ್ದಾರಂತೆ.
ಈ ಬಗ್ಗೆ ಧನಂಜಯ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದ್ದು, ಅದರ ಜೊತೆಗೆ ಅಗ್ನಿ ಶ್ರೀಧರ್ರವರ ‘ದಾದಾಗಿರಿಯ ದಿನಗಳು’ ಆಧಾರಿತ, ಜಯರಾಜ್ ಆಗಿ ನಾನು ನಟಿಸುತ್ತಿರುವ ಸಿನಿಮಾದ ಶೀರ್ಷಿಕೆ ಇದೇ ಆಗಸ್ಟ್ 15 ರಂದು ನಮ್ಮ ನೆಚ್ಚಿನ ಪುನೀತ್ ರಾಜಕುಮಾರ್ ರವರು ಬಿಡುಗಡೆ ಮಾಡಲಿದ್ದಾರೆ. ಅಶು ಬೇದ್ರ ನಿರ್ಮಾಣ ಹಾಗು ಶೂನ್ಯ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ ಅಂತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂದ್ದು ಡಾಲಿ ಅಭಿಮಾನಿಗಳು ಕಮೆಂಟ್ ಎಂಡ್ ಲೈಕ್ಸ್ಗಳ ಮಹಾಪೂರವೇ ಅರಿಸಿದ್ದಾರೆ.
ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಡಾಲಿ ಇತ್ತೀಚೆಗಷ್ಟೆ ರತ್ನನ್ ಪ್ರಪಂಚಕ್ಕೆ ಕಾಲಿಟ್ಟಿದ್ರು., ಸಲಗ, ಯುವರತ್ನ ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ಅಷ್ಟೇ ಅಲ್ಲದೆ, ಬಡವ ಱಸ್ಕಲ್ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿ ಇದೆ. ಇನ್ನು ಡಾನ್ ಜಯರಾಜ್ ಆಗಿ ಭೂಗತ ಲೋಕವನ್ನ ಆಳೋಕೆ ರೆಡಿಯಾಗಿರುವ ಧನಂಜಯ್ನ ಈ ಸಿನಿಮಾದ ಟೈಟಲ್ ಹೇಗಿರುತ್ತೆ ಅನ್ನೋದನ್ನ ನೋಡೋಕೆ ಫ್ಯಾನ್ಸ್ಗಳು ಸಖತ್ ಕ್ಯೂರಿಯಾಸಿಟಿಯಿಂದ ಕಾಯ್ತಿದ್ದಾರೆ..
ಅಗ್ನಿ ಶ್ರೀಧರ್ ರವರ ‘ದಾದಾಗಿರಿಯ ದಿನಗಳು’ ಆಧಾರಿತ, ಎಂ.ಪಿ.ಜಯರಾಜ್ ಆಗಿ ನಾನು ನಟಿಸುತ್ತಿರುವ ಸಿನಿಮಾದ ಶೀರ್ಷಿಕೆ ಇದೇ ಆಗಸ್ಟ್ 15 ರಂದು ನಮ್ಮ ನೆಚ್ಚಿನ ಪುನೀತ್ ರಾಜಕುಮಾರ್ ರವರು ಬಿಡುಗಡೆ ಮಾಡಲಿದ್ದಾರೆ. ಅಶು ಬೇದ್ರ ನಿರ್ಮಾಣ ಹಾಗು ಶೂನ್ಯ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. @PuneethRajkumar @AshuBedra pic.twitter.com/AO91qCIhds
— Dhananjaya (@Dhananjayaka) August 12, 2020