ನೆಲಮಂಗಲ: ಸಿಎಂ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಎರಡು ದಿನದಿಂದ ಎಲ್ಲಾ ತಯಾರಿ ಮಾಡಿದ್ದು ಮನೆಗೆ ಸಿಎಂ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಂದು ಸಿಎಂ ಕಾರ್ಯಕ್ರಮವನ್ನು ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಕಾರ್ಯಕ್ರಮ ಮೊಟಕುಗೊಳಿಸಿ ಬೆಂಗಳೂರು ಕಡೆ ಸಿಎಂ ಪಯಣ ಬೆಳೆಸಿದ್ದರು. ಹೀಗಾಗಿ ಸಿಎಂ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಮನೆಗೆ ಭೇಟಿ ನೀಡಿಲ್ಲ. ನಮಗೆ ಬೆಲೆ ಇಲ್ಲದಂತಾಗಿದೆ ಎಂದು ಕಾರ್ಯಕರ್ತರು ಕಣ್ಣೀರು ಹಾಕಿದರು.