ಬೆಂಗಳೂರು: ಕೇಂದ್ರ ಸರ್ಕಾರ 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಕಾಯ್ದೆ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಘೋಷಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕಾಯ್ದೆ ಹಿಂಪಡಿಯುವಂತೆ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ, ಹೋರಾಟ ನಡೆಸುತ್ತಿದ್ದರು, ಕೊನೆಗೂ ರೈತರ ಹೋರಾಟಕ್ಕೆ ಮೋದಿ ಸರ್ಕಾರ ಮಣಿದಿದ್ದಾರೆ. ಆದರೆ ಈ ಬಗ್ಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಯಾವುದೇ ಪ್ರತಿಕ್ರಿಯೆಯನ್ನ ನೀಡಿಲ್ಲ, ಈ ಹಿನ್ನೆಲೆ ಬಿಜೆಪಿ ಶಾಸಕರು ಬಿ.ಸಿ. ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದು, ಕೃಷಿ ಮಂತ್ರಿ ಕೆಲಸ ಮಾಡುತ್ತಿಲ್ಲ, ಕೃಷಿ ಸಚಿವರನ್ನ ಬದಲಿಸಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಕೃಷಿ ಮಂತ್ರಿ ಕೆಲಸ ಮಾಡುತ್ತಿಲ್ಲ, ನಾವು ಈ ಬಾರಿ ಸೋಲುತ್ತೇವೆ, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಅತಿ ಹೆಚ್ಚು ಮಳೆಯಿಂದ ಬೆಳೆ ಹಾಳಾಗಿದೆ, ಕೃಷಿ ಇಲಾಖೆಯಲ್ಲಿ ಕಮಿಷನ್ ದಂಧೆ ನಡೆಯುತ್ತಿದ್ದು ರೈತರಿಗೆ ಪರಿಹಾರ ಸಮೀಕ್ಷೆ ಸಿಗುತ್ತಿಲ್ಲ, ಕೃಷಿ ಸಚಿವರು ಚಿತ್ರ ನಟರ ಜೊತೆ ಶೋಕಿ ಮಾಡುತ್ತಿದ್ದಾರೆ, ಕೃಷಿ ಮಂತ್ರಿ ಬದಲಿಸಿ ಎಂದು ಬಿಜೆಪಿ ಹೈಕಮಾಂಡಿಗೆ 20 ಕ್ಕೂ ಹೆಚ್ಚು ಶಾಸಕರು ಒತ್ತಾಯ ಮಾಡುತ್ತಿದ್ದಾರೆ. ಹಾಗೂ ಈ ಬಗ್ಗೆ ರಾಜ್ಯಾಧ್ಯಕ್ಷ ಮತ್ತು ರಾಜ್ಯ ಉಸ್ತುವಾರಿಗೂ ದೂರು ನೀಡಿದ್ದೇವೆ ಎಂದು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಾಸಕರೊಬ್ಬರು ಬಿಟಿವಿಗೆ ತಿಳಿಸಿದ್ದಾರೆ.
ಕೃಷಿ ಕಾಯ್ದೆ ವಾಪಸ್ ಆಗಿರುವುದರ ಬಗ್ಗೆ ಕೃಷಿ ಸಚಿವರಿಗೆ ಗೊತ್ತಿಲ್ಲ, ಪ್ರಧಾನಿ ಮೋದಿಯನ್ನು ಬಿ ಸಿ ಪಾಟೀಲ್ ಕನಿಷ್ಠ ಅಭಿನಂದಿಸಿಲ್ಲ, ಕಾಯ್ದೆ ಹಿಂಪಡೆದಿರುವುದಕ್ಕೆ ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷರು ಮೋದಿಯನ್ನು ಅಭಿನಂಧಿಸಿದ್ದರೂ ಕೃಷಿ ಸಚಿವರು ಈವರೆಗೂ ಅಭಿನಂದನೆ ಸಲ್ಲಿಸಲಿಲ್ಲ ಹೀಗಾಗಿ ಎಲ್ಲರ ಕೋಪಕ್ಕೆ ಬಿ.ಸಿ ಪಾಟೀಲ್ ಗುರಿಯಾಗಿದ್ದಾರೆ.
ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಎಬಿ ಡಿವಿಲಿಯರ್ಸ್…